Tuesday, June 23, 2026
spot_imgspot_img
spot_imgspot_img

ಕೇರಳ: 6 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪ; ಸಿಪಿಐಎಂನ ಯುವ ನಾಯಕನ ಬಂಧನ

- Advertisement -
- Advertisement -

ತಿರುವನಂತಪುರಂ: ಆರು ವರ್ಷದ ಬಾಲಕಿಯನ್ನು ಮೂರು ವರ್ಷಗಳ ಕಾಲ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಆರೋಪದಲ್ಲಿ ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಯುವ ನಾಯಕನನ್ನು ಬಂಧಿಸಲಾಗಿದೆ.

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದೆ. ಯುವಕ ಕಳೆದ ಮೂರು ವರ್ಷಗಳಿಂದ ಬಾಲಕಿಗೆ ಸ್ವೀಟ್ ಕೊಡುವ ನೆಪದಲ್ಲಿ ಆಕೆಯನ್ನು ಭೇಟಿ ಮಾಡಿ ಅತ್ಯಾಚಾರವೆಸಗುತ್ತಿದ್ದ.

ಅದೇ ರೀತಿ ಜೂನ್ 30ರಂದು ಆಕೆಯ ಮನೆಯ ಕೋಣೆಯೊಳಗೆ ಹೋದ ಆತ ಬಾಲಕಿಯನ್ನು ಅತ್ಯಾಚಾರ ಮಾಡಿದ್ದಾನೆ. ಆ ವೇಳೆ ಬಾಲಕಿ ಮೂರ್ಛೆ ಹೋಗಿದ್ದಾಳೆ. ಆಕೆ ಸತ್ತೇ ಹೋಗಿದ್ದಾಳೆ ಎಂದು ಭಾವಿಸಿದ ಆತ ಆಕೆಯ ಕುತ್ತಿಗೆಗೆ ನೇಣು ಬಿಗಿದು ಕೊಲೆ ಮಾಡಿದ್ದಾನೆ.

ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ವಿಚಾರ ಹೊರಬಿದ್ದಿದೆ. ಬಳಿಕ ತನಿಖೆ ತೀವ್ರಗೊಳಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ. ಇದೀಗ ಆರೋಪಿ ಪೊಲೀಸರ ವಶದಲ್ಲಿದ್ದಾನೆ.

- Advertisement -

Related news

error: Content is protected !!