Saturday, April 27, 2024
spot_imgspot_img
spot_imgspot_img

ಕೇರಳದಿಂದ ದೇವರ ಹೆಸರಿನಲ್ಲಿ ಡ್ರಗ್ಸ್ ಸಪ್ಲೈ: ಆರೋಪಿಗಳ ಬಂಧನ

- Advertisement -G L Acharya panikkar
- Advertisement -

ಬೆಂಗಳೂರು: ದೇವರ ಚಿತ್ರವಿರುವ ಸ್ಟ್ಯಾಂಪ್ ಗಳಿಗೆ ಡ್ರಗ್ಸ್ ಅಂಟಿಸಿ ಕೇವಲ 20 ರೂಪಾಯಿಯ ಎನ್ವಲಪ್ ಕವರ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.

ದೇವರನಾಡು ಎಂದೇ ಕರೆಯಲ್ಪಡುವ ಕೇರಳದಿಂದ ದೇವರ ಹೆಸರಿನಲ್ಲಿ ಈ ಡ್ರಗ್ಸ್ ಪೂರೈಕೆಯಾಗುತ್ತಿದೆ. ಕೊರಿಯರ್ ಮೂಲಕ ಈ ಸ್ಟ್ಯಾಂಪ್ ಆನೆಕಲ್ ನ ಹೆಬ್ಬಗೋಡಿ ಬಳಿಯ ಸ್ಪರ್ಶ್ ಮತ್ತು ಹೆಲ್ತ್ ಸಿಟಿಯಲ್ಲಿನ ಎಕ್ಸ್ ರೇ ಟೆಕ್ನಿಷಿಯನ್ ಅರುಣ್ ಎಂಬಾತನಿಗೆ ಕಳುಹಿಸಲಾಗುತ್ತಿತ್ತು.

ಕೊಟ್ಟಾಯಂ ನಿಂದ ಗಣೇಶ್ ಎಂಬಾತ ಈ ಕೊರಿಯರ್ ಕಳುಹಿಸುತ್ತಿದ್ದ ಕಳೆದ ನಾಲ್ಕು ತಿಂಗಳಿಂದ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ದೇವರ ಚಿತ್ರವಿರುವ 400ಕ್ಕೂ ಹೆಚ್ಚು ಸ್ಟ್ಯಾಂಪ್ ಸಿಕ್ಕಿದ್ದು. 15 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!