- Advertisement -
- Advertisement -
ಬೆಳ್ತಂಗಡಿ :ಯುವಕನೊರ್ವ ಅಪ್ರಾಪ್ತೆಯನ್ನು ಮದುವೆಯಾದ ಘಟನೆ ಜೂ. 29 ರಂದು ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಮುದ್ರಾಜೆಯ ‘ಕಿರಣ್’ ಎಂಬಾತನೇ ಅಪ್ರಾಪ್ತೆಯ ವಿವಾಹವಾದ ವ್ಯಕ್ತಿ.ದಿನಾಂಕ: 28-06-2020 ರಂದು ಅಪ್ರಾಪ್ತೆಯು ಮನೆಯಿಂದ ಅಜ್ಜನ ಮನೆಗೆ ಹೋಗುವುದಾಗಿ ಹೇಳಿದ್ದು ಬಳಿಕ ಅಜ್ಜನ ಮನೆಗೆ ಹೋಗದೆ ನಾಪತ್ತೆಯಾಗಿದ್ದಳು. ಮಗಳನ್ನು ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ಮುದ್ರಾಜೆ ಪೆಲತ್ತಡಿ ಮನೆಯ ನಿವಾಸಿ ಗಿರಿಯಪ್ಪ ರವರ ಮಗನಾದ ಕಿರಣ್ ಎಂಬಾತನು ಅಪಹರಿಸಿಕೊಂಡು ಹೋಗಿ ಬೆಳ್ತಂಗಡಿಯ ನಾಗವರ್ಮ ಮೆಲಂತಬೆಟ್ಟು ದೇವಾಸ್ಥಾನ ದಲ್ಲಿ ಅನಧಿಕೃತವಾಗಿ ವಿವಾಹವಾಗಿರುವುದು ತಿಳಿದು ಬಂದಿರುತ್ತದೆ.

ಈತನ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಅಪ್ರಾಪ್ತೆಯನ್ನು ವಿವಾಹ ವಾದ ಹಿನ್ನೆಲೆಯಲ್ಲಿ ಆರೋಪಿ ಕಿರಣ್ ವಿರುದ್ಧ ಬಾಲವಿವಾಹ ಕಾಯ್ದೆ ಹಾಗೂ ಫೋಕ್ಸೋ ಪ್ರಕರಣ, ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
- Advertisement -