Monday, April 15, 2024
spot_imgspot_img
spot_imgspot_img

ಕೋವಿಡ್ ಟೆಸ್ಟ್ ಲ್ಯಾಬ್ 2 ದಿನ ಬಂದ್.!!!-ಕೊಡಗು ‘ಜಿಲ್ಲಾಧಿಕಾರಿ’

- Advertisement -G L Acharya panikkar
- Advertisement -

ಕೋವಿಡ್-19 ರ ಸಂಬಂಧ ಕೊಡಗು ಜಿಲ್ಲೆಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ Micro Biology ವಿಭಾಗದಲ್ಲಿ ಕೋವಿಡ್ ಪರೀಕ್ಷೆ ಪ್ರಯೋಗಾಲಯವನ್ನು ಸ್ಥಾಪಿಸಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.ಈ ದಿನ ಬೆಳಿಗ್ಗೆ ಈಗಾಗಲೇ ವರದಿಯಾಗಿ, ಪ್ರಕಟಿಸಿರುವ ಪ್ರಕರಣಗಳಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಈ ಹಿಂದೆ ಮಡಿಕೇರಿ ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟ ನಾಲ್ಕು ಜನ ವೈದ್ಯರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ.

ಈ ಇಬ್ಬರು ಆರೋಗ್ಯ ಕಾರ್ಯಕರ್ತರು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಅಧೀನದ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಆದ್ದರಿಂದ ಸದರಿ ಪ್ರಯೋಗಾಲಯಕ್ಕೆ ಸೋಂಕು ನಿವಾರಕವನ್ನು ಸಿಂಪಡಿಸುವ ಉದ್ಧೇಶದಿಂದ ಇಂದು (ದಿ:03-07-2020) ಮತ್ತು ನಾಳೆ (ದಿ:04-07-2020) ರಂದು ಪ್ರಯೋಗಾಲಯವನ್ನು ಮುಚ್ಚಲಾಗಿದೆ.ದಿನಾಂಕ:05-07-2020 ರಿಂದ ಪ್ರಯೋಗಾಲಯವು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!