Friday, April 26, 2024
spot_imgspot_img
spot_imgspot_img

ಮಸೀದಿ ಉದ್ಘಾಟನೆಗೆ ಹಿಂದೂ ಹುಡುಗಿಯರನ್ನು ಕರೆದುಕೊಂಡು ಹೋದ ಆರೋಪ; ಆಕ್ರೋಶಗೊಂಡ ಹಿಂದೂ ಸಂಘಟನೆ

- Advertisement -G L Acharya panikkar
- Advertisement -

ಕೊಕ್ಕಡ: ಕೊಕ್ಕಡದಲ್ಲಿ ನವೀಕರಣಗೊಂಡು ನಿನ್ನೆ, ಮಾರ್ಚ್ 20 ರಂದು ಉದ್ಘಾಟನೆಗೊಂಡ ಮಸೀದಿಗೆ ಆಮಂತ್ರಣ ಇತ್ತು ಅಂತ ಸರಕಾರೀ ಶಾಲೆಯ ಹಿಂದೂ ಹುಡುಗಿಯರನ್ನು ಕರೆದುಕೊಂಡು ಹೋಗಿರುವುದು ಈಗ ವಿವಾದಕ್ಕೆ ಕಾರಣ ಆಗಿದೆ.

ಅಲ್ಲಿನ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಮಸೀದಿ ಉದ್ಘಾಟನೆಗೆ ಕರಕೊಂಡು ಹೋಗಿದ್ದರು. ವಿಷಯವೇನೆಂದರೆ, ಅಧ್ಯಕ್ಷರ ಮತ್ತು ಶಾಲಾ ಕಮಿಟಿಯ ಹಾಗೂ ಮಕ್ಕಳ ಪಾಲಕರ ಅನುಮತಿ ಪಡೆಯದೆ, ಕಣ್ಣುತಪ್ಪಿಸಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಈ ಸ್ವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದು ಎಷ್ಟರಮಟ್ಟಿಗೆ ಸರಿ ಎಂದು ಈಗ ಚರ್ಚೆ ಆರಂಭ ಆಗಿದೆ.

ಮೇಲ್ನೋಟಕ್ಕೆ ಇದು ಸೆಕ್ಯುಲರಿಸಂ. ಆದರೆ ಹಿನ್ನೆಲೆಯಲ್ಲಿ ನೋಡಿದರೆ, ದೇಶಾದ್ಯಂತ ಹೆಚ್ಚುತ್ತಿರುವ ಲವ್ ಜಿಹಾದ್, ದಿನ ನಿತ್ಯ ನಡೆಯುತ್ತಿರುವ ಅನ್ಯಕೋಮಿನ ಯುವಕರ ಹಾವಳಿ, ಹಿಂದಿನ ದಿನಗಳಲ್ಲಿ ನಡೆದ ಕೊಲೆ ಪ್ರಕರಣಗಳ ನೆನಪು ಮತ್ತು ತದನಂತರ ನಡೆದ ಅನಾಹುತಗಳು ಆಸುಪಾಸಿನ ಜನರ ಮನಸ್ಸಿನಲ್ಲಿ ಉಳಿದಿರುವಾಗಲೇ ಇಂತಹಾ ನಿರ್ಧಾರ ಸರಿಯೇ..? ಮೊದಲೇ ಲವ್ ಜಿಹಾದ್ ಅನ್ನುವುದು ಅವಿಭಜಿತ ದಕ್ಷಿಣಕನ್ನಡದಲ್ಲಿ ಬರ್ನಿಂಗ್ ಮ್ಯಾಟರ್. ಸಮಾಜವನ್ನು ಕಿತ್ತು ತುಂಡರಿಸಿ ಬಿಟ್ಟಿದೆ. ಇಂತಹಾ ಅತಿ ಸೂಕ್ಷ್ಮ ವಿಷಯದಲ್ಲಿ ಸ್ಥಳೀಯ ಹಿಂದೂ ನಾಯಕರುಗಳೇ ಯಾಮಾರಿದರಾ ?

“ಏನಾದರೂ ಘಟನೆಗಳು ನಡೆದ ಮೇಲೆಯೇ ಎಚ್ಙರವಾಗೋದಾ.? ಪ್ರಸ್ತುತ ಕೊರೊನಾ ಸಮಯ ಬೇರೆ. ಹಲವು ಸಮಸ್ಯೆಗಳ ನಡುವೆ ಶಾಲೆ ತೆರೆಯುವುದೇ ಕಷ್ಟದಲ್ಲಿ. ಹಾಗಿರುವಾಗ ಮಕ್ಕಳನ್ನು ಹಿಂಡುಗಟ್ಟಿಗೊಂಡು ಕಳುಹಿಸುತ್ತೀರಲ್ಲಾ ಶಿಕ್ಷಕರೇ, ನಿಮಗೆ ಬಿರಿಯಾನಿ ತಿನ್ನುವ ತವಕ ಇದ್ದರೆ, ತಿಂದು ಸಾಯಬಹುದಲ್ವಾ ? ತಬ್ಲಿಗಿಯವರು ಮಾಡಿದ ಅವಾಂತರ ನೆನಪು ಇಲ್ವಾ? ಏನ್ ನಮ್ಮ ಹೆಣ್ಣು ಮಕ್ಕಳನ್ನು ಪ್ರದರ್ಶನಕ್ಕೆ ಕರೆದುಕೊಂಡು ಹೋಗಿದ್ದಾ?” “ಅಲ್ಲದೆ ಸ್ತ್ರೀಯರಿಗೆ ಮಸೀದಿ ಪ್ರವೇಶ ನಿಷಿದ್ಧ ಅಲ್ಲವೇ ? ಹಾಗಿರುವಾಗ ಸೆಕ್ಯುಲರಿಸಂನ ವೇಷ ತೊಟ್ಟು ಹೋದದ್ದು ಎಸ್ಟು ಸರಿ. ಅದೂ ಅನ್ಯ ಧರ್ಮದ ಸ್ತ್ರೀಯರಿಗೆ ಆಹ್ವಾನ ನೀಡಿರುವ ಉದ್ದೇಶ ಏನು? ಇದು ದ್ವಿಮುಖ ನೀತಿ ಅಲ್ಲವೇ..? ” ಹೀಗೆಂದು ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿರುವ ತುಕಾರಾಂ ಅವರು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.

- Advertisement -

Related news

error: Content is protected !!