Friday, March 29, 2024
spot_imgspot_img
spot_imgspot_img

ಸೆಟ್ಟೇರಿದ “ಕೋಲ”

- Advertisement -G L Acharya panikkar
- Advertisement -

ಕೊಡಗು ,ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನಲ್ಲಿ ಪ್ರಚಲಿತದಲ್ಲಿ ಇರುವ ಅರೆಭಾಷೆಯಲ್ಲಿ ಮತ್ತೊಂದು ಕಿರು ಚಿತ್ರ ಸೆಟ್ಟೇರಲಿದೆ.

ಉತ್ತಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ, ಹವಿನ್ ಗುಂಡ್ಯ ಅವರ ನಿರ್ದೇಶನದಲ್ಲಿ ಕೋಲ ಎಂಬ ಕಿರು ಚಿತ್ರ ನಿರ್ಮಾಣಗೊಳ್ಳುತ್ತಿದೆ.

ಇಂದು ಬೆಳಿಗ್ಗೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಗುಂಡ್ಯ ಮನೆಯ ಸ್ಥಾನದ ಮನೆಯಲ್ಲಿ ಚಿತ್ರದ ಮುಹೂರ್ತ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ ಕಜಗದ್ದೆ, ಖ್ಯಾತ ರಂಗ ನಿರ್ದೇಶಕ ರಂಗ ಮನೆಯ ಜೀವನ್ ರಾಂ ಸುಳ್ಯ, 93.5 ರೆಡ್ ಎಫ್.ಎಂ ನ ಕಂಬಳ ಮನೆ ತ್ರಿಶೂಲ್, ಚಿತ್ರದ ತಂಡದ ಕಲಾವಿದರು ಮತ್ತು ಗುಂಡ್ಯಮನೆ ಕುಟುಂಬಸ್ಥರು ಹಾಜರಿದ್ದರು.

ದೀಪ ಬೆಳಗುವುದರ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅಕಾಡೆಮಿ ಅಧ್ಯಕ್ಷರು ಒಂದು ಭಾಷೆ ಉಳಿಯಬೇಕೆಂದರೆ ಅದರ ಬಳಕೆ ಎಲ್ಲಾ ಕ್ಷೇತ್ರಗಳಲ್ಲಿಯೂ ಆಗಬೇಕು. ಇಂದು ಯುವ ಜನತೆ ಭಾಷೆಯತ್ತ ಒಲವು ತೋರುತ್ತಿರುವುದು ಸಂತಸದ ಸಂಗತಿ. ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಲ್ಲಿ ಈಗಾಗಲೇ ಭಾಷೆಯ ಬಳಕೆ ಹೆಚ್ಚಾಗುತ್ತಿದ್ದು. ಸಿನಿಮಾ ಕ್ಷೇತ್ರದಲ್ಲಿ ಕೂಡ ಭಾಷಾ ಬಳಕೆ ಆದರೆ ಮತ್ತಷ್ಟು ಕಡೆ ಭಾಷೆಯ ಪರಿಚಯ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ರಂಗ ನಿರ್ದೇಶಕ ಜೀವನ್ ರಾಂ ಅವರು ಮಾತನಾಡಿ ಕಲೆ ಮತ್ತು ಸಂಸ್ಕೃತಿಯ ಒಲವು ಬೆಳಸಿಕೊಂಡವರು ಎಂದಿಗೂ ಸಮಾಜಕ್ಕೆ ಮಾರಕ ಆಗಲಾರರು. ಭಾಷೆ ಮತ್ತು ಸಂಸ್ಕೃತಿ ಇನ್ನಷ್ಟು ಉತ್ತುಂಗಕ್ಕೆ ಏರಲಿದೆ ಎಂದು ಅಭಿಪ್ರಾಯಪಟ್ಟರಲ್ಲದೆ ತಂಡಕ್ಕೆ ಶುಭ ಕೋರಿದರು.

ತಾರಾಂಗಣದಲ್ಲಿ ವಿನೋದ್ ಮೂಡಗದ್ದೆ, ಪಟ್ಟಮಾಡ ರಾಜ್ ಮುಖೇಶ್, ಕಂಬಳಮನೆ ತ್ರಿಶೂಲ್, ಜೀವನ್ ರಾಂ ಸುಳ್ಯ, ಗಂಗಾಧರ ನೆಲ್ಲಿಕೋಡಿ, ಹರ್ಷವರ್ಧನ್ ಕಣಿಪಿಲ, ಜಯಪ್ರಕಾಶ್ ಪೆರಮುಂಡ, ಮುರಳಿಕೃಷ್ಣ ಯೋಗೀಶ್ವರ್ ನಾಯಕ್, ಸುಂದರ ಹೆಚ್ ಪಂಜ, ಯತೀನ್ ಹಾರಂಬಿ, ಜೀವನ್ ಕೆರೆಮೂಲೆ, ಚೇತನ್ ಗಬ್ಬಲಡ್ಕ, ಪ್ರಶಾಂತ್, ಶಶಿಕಾಂತ ಮಿತ್ತೂರು, ಶೃತಿ ಮೆದು, ದೀಕ್ಷಿತ್, ದೇವಿಪ್ರಸಾದ್ ಭಟ್, ವಿಖ್ಯಾತ್ ಪಡ್ಪು ಇದ್ದು ಛಾಯಾಗ್ರಹಣ ಸಂದೇಶ್ ನಾಯಕ್ ಮಾಪಳಕಜೆ.

- Advertisement -

Related news

error: Content is protected !!