- Advertisement -
- Advertisement -



ಬಂಟ್ವಾಳ ತಾಲೂಕು ಸುಗ್ರಾಮ ಜಾಗೃತಿ ವೇದಿಕೆಯ ವತಿಯಿಂದ ಮಹಿಳೆಯರ ಸಬಲೀಕರಣ ಹಿತದೃಷ್ಟಿಯಿಂದ ಮಹಿಳೆಯರಿಗೆ ಸರಕಾರಗಳಿಂದ ಸವಲತ್ತುಗಳು, ಉದ್ಯೋಗ ಖಾತರಿಯಿಂದ ಗ್ರಾ.ಪಂಚಾಯತ್‌ನಿಂದ ಸಿಗುವ ಸವಲತ್ತುಗಳು, ವಾರ್ಡ್ ಸಭೆ , ಗ್ರಾಮ ಸಭೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಮತ್ತು ಪ್ರಶ್ನಿಸುವ ಅಧಿಕಾರ ಇನ್ನಿತರ ವಿಷಯಗಳ ಕುರಿತು ಕೊಳ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಳಿತ್ತನೂಜಿ ವಾರ್ಡಿನ ದ.ಕ.ಜಿ. ಪಂಚಾಯತ್ ಸರಕಾರಿ ಉನ್ನತೀಕರಿಸಿದ ಶಾಲೆ ತಾಳಿತ್ತನೂಜಿಯಲ್ಲಿ ದ.ಕ. ಜಿಲ್ಲಾ ಸುಗ್ರಾಮ ಜಾಗೃತಿ ಸಂಯೋಜಕರಾದ ಚೇತನ್ .ಪಿ.ಮಾಹಿತಿ ಕಾರ್ಯಗಾರ ನಡೆಸಿದರು.
ಮುಂದಿನ ಕಾರ್ಯಗಾರವನ್ನು ನಾರ್ಶ ಕೇಂದ್ರವಾಗಿರಿಸಿ ನಡೆಸಲಾಗುವುದೆಂದು ತೀರ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಉಪಾದ್ಯಕ್ಷ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂಚಾಯತಿನಿಂದ ಸಿಗುವ ಸೌಲಭ್ಯಗಳ ಮಾಹಿತಿ ಸ್ಥಳೀಯ ವಾರ್ಡಿನ ಮತದಾರರೊಂದಿಗೆ ಹಂಚಿಕೊಂಡರು.
- Advertisement -








