Monday, April 29, 2024
spot_imgspot_img
spot_imgspot_img

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷವಧಿ ಜಾತ್ರೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.14ರಿಂದ ಜ. 16ರವರೆಗೆ ನಡೆಯಲಿರುವ ವರ್ಷವಧಿ ಜಾತ್ರೋತ್ಸವದ ಕೊನೆಯ ದಿನವಾದ ಜ.16ರಂದು ಕಿರುಷಷ್ಠಿ ಉತ್ಸವ ನಡೆಯಿತು.

ಬೆಳಗ್ಗೆ ದೇವರ ಬಲಿ ಹೊರಟು, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಬಳಿಕ ಪ್ರಸಾದ ವಿತರಣೆ ನಡೆಯಿತು. ಆ ಬಳಿಕ ಸ್ಥಳದೈವ ಪಿಲಿಚಾಮುಂಡಿ ನೇಮೋತ್ಸವ ನಡೆಯಿತು. ಬಳಿಕ ಮಹಾಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪುತ್ತೂರು ವಿಧಾ‌ನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ, ಕ್ಷೇತ್ರದ ಪದ ನಿಮಿತ್ತ ಆಡಳಿತಾಧಿಕಾರಿ, ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತ, ಉತ್ಸವ ಸಮಿತಿಯ ಪದಾಧಿಕಾರಿಗಳಾದ ಪ್ರಕಾಶ್ ಕೆ. ಎಸ್. ಊರಿಮಜಲು, ಸುರೇಶ್ ಕೆ. ಎಸ್. ಮುಕ್ಕುಡ, ಕೆ. ವೆಂಕಟರಮಣ ಭಟ್ ಸೂರ್ಯ, ವಿಜಯಕುಮಾರ ಗೌಡ ಸೂರ್ಯ, ಚಂದ್ರಶೇಖರ ಕಂಬಳಿ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ, ಸುರೇಶ್ ಪೂಜಾರಿ ಸೂರ್ಯ, ವಿ.ಕೆ. ಕುಟ್ಟಿ ಊರಿಮಜಲು, ಉಷಾ ಮುಂಡ್ರಬೈಲು, ಶಶಿಪ್ರಭ ಮಿತ್ತೂರು ಗುತ್ತು ಮನೆತನದ ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಎಸ್.ಎಲ್.ವಿ. ಬುಕ್ಸ್ ಇಂಡಿಯಾ ಪ್ರೈವೇಟ್ ಲಿ. ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆ, ರಮೇಶ್ ಭಟ್ ಮಿತ್ತೂರು ಭಂಡಾರಮನೆ ಸೇರಿದಂತೆ ಊರ ಪರವೂರ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಪುಷ್ಪಾಲಂಕಾರದಿ ವಿರಾಜಿತ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಜಾತ್ರೋತ್ಸವ ಅಂದರೆ ದೇವರು ಮತ್ತು ದೇವಸ್ಥಾನದ ಅಲಂಕಾರವೂ ಹೆಚ್ಚಿನ ಗಮನ ಸೆಳೆಯುವಂತಿರುತ್ತದೆ. ಕೋಲೆ ಶ್ರೀ ಷಣ್ಮುಖ ಸುಬ್ರಹ್ಮಣ್ಯನಿಗೆ ವರ್ಷಂಪ್ರತಿ ಜಾತ್ರೋತ್ಸವದ ಸಂದರ್ಭದಲ್ಲಿ ಪುಷ್ಪಾಲಂಕಾರ ಸೇವೆ ನಡೆಸುತ್ತಿರುವವರು ಇಡ್ಕಿದು ಗ್ರಾಮದ ನೇರ್ಲಾಜೆ ನಿವಾಸಿ ದಿ. ರಾಮದಾಸ್ ಹಾಗೂ ದಿ. ಸುಂದರಿ ರಾಮದಾಸ್ ರವರ ಪುತ್ರ ಎಸ್.ಎಲ್.ವಿ.ಬುಕ್ಸ್ ಇಂಡಿಯಾ‌ ಪ್ರೈವೇಟ್ ಲಿ. ಆಡಳಿತ ನಿರ್ದೇಶಕರಾದ ದಿವಾಕರ ದಾಸ್ ನೇರ್ಲಾಜೆರವರು. ವರ್ಷಂಪ್ರತಿ ಲಕ್ಷಾಂತರ ರೂಪಾಯಿ ವಚ್ಚದಲ್ಲಿ ಹೂವಿನ ಅಲಂಕಾರ ಸೇವೆಯನ್ನು ಮಾಡಿಸುತ್ತಾ ಬರುತ್ತಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಕ್ಷೇತ್ರವನ್ನು ಹೂವಿನ ಅಲಂಕಾರದಿಂದ ಶೃಂಗರಿಸಲಾಗಿದೆ. ಷಷ್ಠಿಯ ದಿನ ಸಾವಿರಾರು ಮಂದಿ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಹೂವಿನ ಅಲಂಕಾರವನ್ನು ಕಣ್ತುಂಬಿಸಿಕೊಂಡರು.

- Advertisement -

Related news

error: Content is protected !!