- Advertisement -
- Advertisement -
ಉಡುಪಿ: ಕೊಂಕಣ ರೈಲ್ವೆ ವ್ಯಾಪ್ತಿಯ ಕಾರವಾರ ವಲಯದ ಗೋವಾ ಬಳಿಯ ಪೆರ್ನಮ್‌ನಲ್ಲಿರುವ ಸುರಂಗ ಮಾರ್ಗದ ಗೋಡೆಯ ಒಂದು ಭಾಗ ಗುರುವಾರ ಭಾರೀ ಮಳೆಯಿಂದಾಗಿ ಕುಸಿದಿದೆ. ಗೋಡೆ ಕುಸಿದು ರೈಲ್ವೆ ಹಳಿ ಮೇಲೆ ಸುರಿದ ಮಣ್ಣು ತೆರವು ನಡೆಯುತ್ತಿದೆ. ಕುಸಿದ ಗೋಡೆಯ ದುರಸ್ಥಿ ಪ್ರಗತಿಯಲ್ಲಿದೆ. ಮುಂದಿನ ಸೂಚನೆ ತನಕ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.
ಇಂದಿನಿಂದ ಮುಂದಿನ ಆದೇಶ ಬರುವವರೆಗೂ ಎರ್ನಾಕುಲಮ್ -ಹಜರತ್ ನಿಜಾಮುದ್ದೀನ್ ಸೂಪರ್ ಪಾಸ್ಟ್ ಟ್ರೈನ್ (ಮಡಗಾಂ, ಮೀರಜ್, ಪುಣೆ, ಪನ್ನವೇಲ್ ಮಾರ್ಗ) ತಿರುವಂತಪುರಂ ಲೋಕಮಾನ್ಯ ತಿಲಕ್ ಟ್ರೈನ್ (ಮಡಗಾಂ, ಲೋಂಡ, ನೀರಜ್, ಪುಣೆ, ಪನ್ನವೇಲ್ ಮಾರ್ಗ), ನ್ಯೂ ಡೆಲ್ಲಿ ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್ ಪ್ರೆಸ್(ಪನ್ನವೇಲ್, ಪುಣೆ, ಮೀರಜ್ ,ಲೋಂಡ, ಮಡಗಾಂ ಮಾರ್ಗ), ಲೋಕಮಾನ್ಯ ತಿಲಕ್ ತಿರುವಂತಪುರಂ ಟ್ರೈನ್ (ಪನ್ನವೇಲ್, ಪುಣೆ, ಮೀರಜ್, ಲೋಂಡ, ಮಡಗಾಂ ಮಾರ್ಗ) ರೈಲುಗಳ ಸಂಚಾರವನ್ನು ಇಂದಿನಿಂದ ಮುಂದಿನ ಆದೇಶದವರೆಗೂ ಬಂದ್ ಮಾಡಲಾಗಿದೆ.
- Advertisement -