- Advertisement -
- Advertisement -



ಕೇರಳದ ಕೊಟ್ಟಾಯಂನಲ್ಲಿ ಕಾರೊಂದು ಅಪಘಾತಕ್ಕೀಡಾಗಿ ಸುರತ್ಕಲ್ ಕಾನ ನಿವಾಸಿ ಯುವಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಮೂಲತಃ ಮುಲ್ಕಿ ತಾಲೂಕಿನ ಅಂಗರಗುಡ್ಡೆ ನಿವಾಸಿ, ಪ್ರಸಕ್ತ ಕಾನದ ಚಿರಾಗ್ ಫ್ಲಾಟ್ ನಲ್ಲಿ ವಾಸವಿದ್ದ ಶಾನವಾಝ್ ಯಾನೆ ಶಮೀಮ್(32) ಮೃತಪಟ್ಟವರು. ಇವರ ಜೊತೆ ಕಾರಿನಲ್ಲಿದ್ದ ಕಾಟಿಪಳ್ಳದ ಸಿರಾಜ್, ಕಾನ ನಿವಾಸಿ ಅಶ್ನಾಕ್, ಸೂರಿಂಜೆ ನಿವಾಸಿ ಶಬೀರ್ ಹಾಗೂ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಸಿರಾಜ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
- Advertisement -








