



ವಿಟ್ಲ ಬಾಲಗೋಕುಲ ಕ್ಷೇತ್ರ ಸಮಿತಿಯಿಂದ 18 ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ವಿಟ್ಲ ಸುವರ್ಣ ರಂಗಮಂದಿರ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಆ.17 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ಕಾರ್ಯಕ್ರಮದ ಶೋಭಾಯಾತ್ರೆಬೆಳಿಗ್ಗೆ ಗಂಟೆ 9.30ಕ್ಕೆ ವಿಟ್ಲ ಕೆ. ಎಸ್. ಆರ್. ಟಿ. ಸಿ. ಬಸ್ ನಿಲ್ದಾಣದಿಂದ ಹೊರಡಲಿದೆ.ಶೋಭಾಯಾತ್ರೆಯನ್ನು ರಾಷ್ಟ್ರೀಯ ಸ್ವಯಂಸೇವಕ ಹಿರಿಯರಾದ ಕೊರಗಪ್ಪ ಗೌಡ ಅಡ್ಡೆಯಿ ಉದ್ಘಾಟಿಸಲಿದ್ದಾರೆ.ಶೋಭಾಯಾತ್ರೆಯಲ್ಲಿ ವಿಟ್ಲದ ಆಸುಪಾಸಿನ ಮಕ್ಕಳ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ ನಡೆಯಲಿದೆ.
ಧಾರ್ಮಿಕ ಸಭೆವಿಟ್ಲ ಸುವರ್ಣ ರಂಗಮಂದಿರ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಆ.17 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಸ್ವಯಂಸೇವಕ ರಮಾನಾಥ ದೇವಾಡಿಗ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉದ್ಯಮಿ ಎಂ. ಸುಭಾಶ್ಚಂದ್ರ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.ಪವಿತ್ರ ವಿಜಯ್ ಕುಂಬಾಡಿ ಮುಖ್ಯ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ, ಮಂಗಳೂರು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿರ್ದೇಶಕ ಮೋಹನ್ ಭಟ್ ಉರಿಮಜಲು, ಮಂಗಳೂರು ನಿವೃತ್ತ ಎಂ ಸಿ ಎಫ್ ಅಧಿಕಾರಿ ಪಿ ಜಯಶಂಕರ್ ರೈ ಚೆಂಬರಡ್ಕ ಉಪಸ್ಥಿತಿರಿರುವರು.ಮಧ್ಯಾಹ್ನ ಗಂಟೆ 12.00ರಿಂದ ಬಾಲಗೋಕುಲ ಮಕ್ಕಳಿಂದಜೈದೀಪ್ ಅಮೈ ನೇತೃತ್ವದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ-ವಿಟ್ಲ ಇವರಿಂದ ಅಮೋಘ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.








