Thursday, March 28, 2024
spot_imgspot_img
spot_imgspot_img

ಪೆರ್ಡೂರಿನ ಪರಾರಿಯಾಗಿದ್ದ ಅಪ್ರಾಪ್ತ ಜೋಡಿ ಭಟ್ಕಳದಲ್ಲಿ ಪತ್ತೆ!!

- Advertisement -G L Acharya panikkar
- Advertisement -

ಉಡುಪಿ(ನ.7): ಪರಾರಿಯಾಗಿದ್ದ ಪೆರ್ಡೂರಿನ ಕುಕ್ಕೆಹಳ್ಳಿಯ ಅಪ್ರಾಪ್ತ ಜೋಡಿಯನ್ನು ಭಟ್ಕಳದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು. ಯುವಕನಿಗೆ 14 ದಿನಗಳ ಕಾಲ ಬಾಲಭವನಕ್ಕೆ ಹಸ್ತಂತರಿಸಲಾಗಿದೆ.

ಅ.28 ರಂದು ಕುಕ್ಕೆಹಳ್ಳಿಯ ಯುವತಿ ಮನೆಯಿಂದ ಸ್ಕಾಲರ್ ಶಿಪ್‌ನ ಅರ್ಜಿ ನೀಡಲೆಂದು ಕಾಲೇಜ್‌ಗೆ ಹೋಗಿದ್ದಳು. ಈ ಸಂದರ್ಭ ಅದೇ ಊರಿನ ತನ್ನ ಕಾಲೇಜಿನ ಯುವಕನೊಂದಿಗೆ ಬೈಕ್‌ನಲ್ಲಿ ಹೋಗುತ್ತಿರುವುದನ್ನು ಯುವಕನ ಸಹೋದರ ನೋಡಿದ್ದಕ್ಕೆ ಹೆದರಿ ಇಬ್ಬರು ಮನೆಗೆ ಹೋಗದೆ ಭಟ್ಕಳ ಕಡೆಗೆ ಬೈಕ್‌ನಲ್ಲಿ ತೆರೆಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇವರಲ್ಲಿ ಖರ್ಚಿಗೆ ಯಾವುದೇ ಹಣವಿಲ್ಲದಾಗ ಯುವತಿಯ ಕಿವಿಯ ಓಲೆಯನ್ನು 1,200 ರೂ.ಗೆ ಮಾರಾಟ ಮಾಡಿದ್ದರು. ಆ ಹಣ ಖರ್ಚಾದಾಗ ಯುವತಿಯು ಬೇರೊಬ್ಬರ ಫೋನಿನಿಂದ ತನ್ನ ತಾಯಿಗೆ ಹಣಕ್ಕಾಗಿ ಕರೆಮಾಡಿದ ಮಾಹಿತಿ ಆದರಿಸಿ ಹಿರಿಯಡ್ಕ ಪೊಲೀಸರು ಅವರನ್ನು ಭಟ್ಕಳದಲ್ಲಿ ಪತ್ತೆ ಹಚ್ಚಿದ್ದಾರೆ. ಸದ್ಯ ಯುವತಿಯನ್ನು ಮನೆಯವರ ಸುರ್ಪದಿಗೆ ನೀಡಲಾಗಿದ್ದು. ಯುವಕನಿಗೆ ನ.14 ರಂದು 18 ವರ್ಷವಾಗುವ ಕಾರಣ ಆತನನ್ನು ಬಾಲಪರಾಧಿ ಎಂದು ಪರಿಗಣಿಸಿ ಬಾಲಭವನಕ್ಕೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ, ಡಿ.ಸಿ.ಐ.ಬಿ ನಿರೀಕ್ಷಕ ಮಂಜಪ್ಪ, ಹಿರಿಯಡ್ಕ ಠಾಣಾ ಪಿ.ಎಸ್.ಐ ಸುಧಾಕರ ತೋನ್ಸೆ, ಬ್ರಹ್ಮಾವರ ಠಾಣಾ ಪಿ.ಎಸ್.ಐ ರಾಘವೇಂದ್ರ ಸಿ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಎ.ಎಸ್.ಐ ಕೃಷ್ಣಪ್ಪ, ಸಿಬ್ಬಂದಿಯವರಾದ ವಾಸುದೇವ ಪಿ, ಪ್ರದೀಪ ನಾಯಕ, ಜ್ಯೋತಿ ಎಂ, ಗಣೇಶ, ರವೀಂದ್ರ ಹೆಚ್, ಡಿ.ಸಿ.ಐ.ಬಿ ತಂಡದ ಸಿಬ್ಬಂದಿಯವರಾದ ರಾಮು ಹೆಗ್ಡೆ, ಸುರೇಶ, ಸಂತೋಷ ಕುಂದರ್, ರಾಘವೇಂದ್ರ, ಶಿವಾನಂದ ಹಿರಿಯಡ್ಕ ಠಾಣೆಯ ಎ.ಎಸ್.ಐ. ಜಯಂತ, ಗಂಗಪ್ಪ ಸಿಬ್ಬಂದಿಯವರಾದ ದಿನೇಶ, ಉದಯ ಕುಮಾರ್, ರಘ, ಇಂದ್ರೇಶ, ನಿತಿನ್, ಹರೀಶ, ಭೀಮಪ್ಪ ಹಡಪದ, ಶಿವರಾಜ್, ಸುಮಲತಾ, ಸುಹಾಸಿನಿ ಬ್ರಹ್ಮಾವರ ಠಾಣೆಯ ಸಿಬ್ಬಂದಿಯವರಾದ ವೆಂಕಟರಮಣ, ಪ್ರವೀಣ ಶೆಟ್ಟಿಗಾರ್, ಅಜ್ಮಲ್, ಕೋಟ ಠಾಣೆಯ ಪ್ರಕಾಶ, ಗಂಗೊಳ್ಳಿ ಠಾಣೆಯ ಶ್ರೀಧರ್ ಮತ್ತು ಪ್ರಿನ್ಸ್, ಮಹಿಳಾ ಠಾಣೆಯ ಮ.ಪಿ.ಎಸ್.ಐ ವೈಲೆಟ್ ಫೆಮಿನಾ, ಸಿಬ್ಬಂದಿಯವರಾದ ಜ್ಯೋತಿ ನಾಯಕ ಹಾಗೂ ಶೇಖರ್, ಅಣ್ಣಪ್ಪ, ಆನಂದ ಪ್ರಕರಣವನ್ನು ಭೇಧಿಸುವಲ್ಲಿ ಸಹಕರಿಸಿರುತ್ತಾರೆ.

ಅಪಹರಣಕ್ಕೆ ಒಳಗಾದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯತುಂಬಿದ ವಿಶ್ವ ಹಿಂದು ಪರಿಷದ್: ಈತನ ಮೇಲೆ ಫೋಕ್ಸ್ಕೋ ಕಾಯಿದೆಯಡಿ ಕಠಿಣ ಕಾನೂನು ಕ್ರಮ ಕೈಗೊಂಡು ಜೊತೆಗೆ ಈ ಕೃತ್ಯವೆಸಗಳು ವ್ಯವಸ್ಥಿತ ಜಾಲ ಇವನ ಜೊತೆ ಕೈಜೋಡಿಸಿದೆ. ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಈ ಕೃತ್ಯ ಕ್ಕೆ ಸಹಕರಿಸಿದರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ವಿಶ್ವ ಹಿಂದು ಪರಿಷದ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಆಗ್ರಹಿಸಿದ್ದಾರೆ. ವಿಶ್ವ ಹಿಂದು ಪರಿಷದ್ ಪ್ರಾಂತ ಭಜರಂಗದಳ ಸಂಯೋಜಕ್ ಸುನೀಲ್ ಕೆಆರ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಜಿಲ್ಲಾ ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್, ವಿಶ್ವ ಹಿಂದು ಪರಿಷದ್ ಉಪಾಧ್ಯಕ್ಷ ಸಂತೋಷ್ ಕುಮಾರ್ ಬೈರಂಪಳ್ಳಿ, ಭಜರಂಗದಳದ ಕಾರ್ಯಕರ್ತರು ವಿದ್ಯಾರ್ಥಿನಿಯ ಮನೆಗೆ ತೆರಳಿ ವಿದ್ಯಾರ್ಥಿನಿಯ ಹೆತ್ತವರಿಗೆ ಮನೆಯವರಿಗೆ ಧೈರ್ಯ ತುಂಬಿದರು.

- Advertisement -

Related news

error: Content is protected !!