Wednesday, July 22, 2026
spot_imgspot_img
spot_imgspot_img

ಕುಂಬಳೆ: ಕಾರು–ಬಸ್ ಢಿಕ್ಕಿ; 12 ಮಂದಿ ಗಾಯ

- Advertisement -
- Advertisement -

ಕಾಸರಗೋಡು: ಶಾಂತಿಪಳ್ಳ ತಿರುವಿನಲ್ಲಿ ಬುಧವಾರ ಬೆಳಿಗ್ಗೆ ಕಾರು ಹಾಗೂ ಖಾಸಗಿ ಬಸ್‌ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಹಾಗೂ ಬಸ್‌ನ ಎಂಟು ಮಂದಿ ಸೇರಿ ಒಟ್ಟು 12 ಮಂದಿ ಗಾಯಗೊಂಡಿದ್ದು, ಈ ಪೈಕಿ ಕಾರಿನಲ್ಲಿದ್ದ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬುಧವಾರ ಬೆಳಿಗ್ಗೆ ಸುಮಾರು 8.30ರ ಸುಮಾರಿಗೆ ಬದಿಯಡ್ಕ ಕಡೆಗೆ ತೆರಳುತ್ತಿದ್ದ ಕಾರು ಮತ್ತು ಕುಂಬಳೆ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಆಲಂಪಾಡಿ ನಿವಾಸಿಗಳಾದ ಮಾಲಿಕ್, ತಾಜುದ್ದೀನ್, ಕಬೀರ್ ಮತ್ತು ಸಿದಾನ್ ಗಾಯಗೊಂಡಿದ್ದು, ಇವರಲ್ಲಿ ಸಿದಾನ್ ಅವರ ಸ್ಥಿತಿ ಗಂಭೀರವಾಗಿರುವುದರಿಂದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಳಿದ ಮೂವರು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್‌ನಲ್ಲಿದ್ದ ಕಾಸರಗೋಡು ಖಾಸಗಿ ಆಸ್ಪತ್ರೆಯ ವೈದ್ಯೆ ಡಾ. ಮುಸ್ಕಾನ, ಕಂಚಿಕಟ್ಟೆಯ ಸುಜಾತ (40), ಸೂರಂಬೈಲು ನಿವಾಸಿ ಹಾಗೂ ಕುಂಜತ್ತೂರು ಶಾಲಾ ಅಧ್ಯಾಪಕಿ ದೀಪ್ತಿ (22) ಸೇರಿ ಒಟ್ಟು ಎಂಟು ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನೊಳಗೆ ಸಿಲುಕಿದ್ದವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ಸಾಗಿಸಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!