Friday, October 2, 2026
spot_imgspot_img
spot_imgspot_img

ಕುಂಬಳೆ: ನದಿಯಲ್ಲಿ ಮುಳುಗಿ ಪುತ್ತೂರಿನ ಇಬ್ಬರು ಯುವಕರು ಮೃತ್ಯು- ಓರ್ವ ನಾಪತ್ತೆ!

- Advertisement -
- Advertisement -

ಕುಂಬಳೆ: ಸ್ನಾನ ಮಾಡಲು ನದಿಗೆ ಇಳಿದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂಬಳೆ ಸಮೀಪದ ಆರಿಕ್ಕಾಡಿ ಎಂಬಲ್ಲಿ ನಡೆದಿದೆ.

ಪುತ್ತೂರು ನಿವಾಸಿಗಳಾದ ಕೀರ್ತನ್ (19) ಮತ್ತು ಕಾರ್ತಿಕ್ (18) ಎಂಬವರು ಮೃತಪಟ್ಟಿದ್ದು, ಜೊತೆಗಿದ್ದ ಇನ್ನೋರ್ವ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಆರಿಕ್ಕಾಡಿ ಸಮೀಪ ನದಿಯಲ್ಲಿ ಮೂವರು ಸ್ನಾನ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ವಿಷಯ ತಿಳಿದು ಶೋಧ ನಡೆಸಿದ ಮೀನುಗಾರರು ಮತ್ತು ಸ್ಥಳೀಯರು ಇಬ್ಬರ ಮೃತದೇಹವನ್ನು ಮೇಲೆಕ್ಕೆತ್ತಿದ್ದು, ಇನ್ನೋರ್ವ ನಾಪತ್ತೆಯಾಗಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಯುವಕರು ಕುಂಬಳೆಯಲ್ಲಿ ನಡೆದ ವಿವಾಹದಲ್ಲಿ ಪಾಲ್ಗೊಳ್ಳಲು ಬಂದಿದ್ದು,ಸಂಜೆ ಬಿಡುವು ಇದ್ದ ಕಾರಣ ನದಿಗೆ ಸ್ನಾನ ಮಾಡಲು ತೆರಳಿದ್ದರು ಎನ್ನಲಾಗಿದೆ.

driving
- Advertisement -

Related news

error: Content is protected !!