- Advertisement -
- Advertisement -





ಕುಂಡಡ್ಕ: ಜಿಲ್ಲಾ ಸಮಿತಿಯ ಮಾರ್ಗದರ್ಶನದಲ್ಲಿ SPYSS ನ 15 ನೇಶಾಖೆಯು ಬಂಟ್ವಾಳ ತಾಲೂಕಿನ ಕುಂಡಡ್ಕ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುಂಡಡ್ಕ ಎಂಬಲ್ಲಿ ಪ್ರಾರಂಭವಾಯಿತು.
ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಅಧ್ಯಕ್ಷ ವೇಣುಗೋಪಾಲರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು. ವಿಟ್ಲ ನಗರ ಸಂಚಾಲಕ ಪ್ರಕಾಶ ಅಣ್ಣಡ್ಕ ಪ್ರಾಸ್ತಾವಿಕ ಮಾತುಗಳ ಮೂಲಕ ಮಾರ್ಗದರ್ಶನ ನೀಡಿದರು. ಶ್ರೀ ಮಹಿಷಮರ್ದಿನಿ ಶಾಖೆ ಪುಣಚ ಇದರ ಶಿಕ್ಷಕ ರಾಜೇಂದ್ರರವರು ಪ್ರೇರಣಾದಾಯಕ ಮಾತುಗಳ ಮೂಲಕ ಶಾಖೆ ಉದ್ಘಾಟನೆಗೊಂಡಿತು.
ಡಾ ಕೆ ಎಮ್ ಭಟ್, ಜಯರಾಮ, ಕೃಷ್ಣಪ್ಪ, ನವೀನ ಕೃಷ್ಣ, ಬೇಬಿ, ಕಮಲ ಅನುಭವ ಹಂಚಿಕೊಂಡರು. ಹೊಸ ಯೋಗ ಬಂಧುಗಳ 30ಮಂದಿ ಒಟ್ಟು 65ಸಂಖ್ಯೆಯಲ್ಲಿ ಭಾಗವಹಿಸಿದರು.
ಶ್ರೀಮತಿ ಬೇಬಿ ಮತ್ತು ಇತರರ ಸುಶ್ರಾವ್ಯ ಭಜನೆ ಮಾಡಿದರು. ಶ್ರೀಮತಿ ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು, ಶ್ರೀಲಕ್ಷ್ಮಿ ಪ್ರಾರ್ಥನೆ ಮಾಡಿದರು. ಶ್ರೀಮತಿ ಪ್ರಶಾಂತಿ ಸ್ವಾಗತಿಸಿ, ಹರಿಶ್ಚಂದ್ರ ವಂದನಾರ್ಪಣೆಗೈದರು.
- Advertisement -








