




ಕುಂಡಡ್ಕ: ಬಂಟರ ಸಂಘ ಕುಳ-ಕುಂಡಡ್ಕ ಆಶ್ರಯದಲ್ಲಿ ಬಂಟೆರ ಕೂಟ 2025 ಹಾಗೂ ವಾರ್ಷಿಕ ಸತ್ಯನಾರಾಯಣ ಪೂಜೆ 28/12/2025ನೇ ಆದಿತ್ಯವಾರ ಕುಂಡಡ್ಕ ಮಾಗಣೆ ಮನೆ ಇಲ್ಲಿ ನಡೆಯಲಿದೆ.
ಬೆಳಿಗ್ಗೆ 8.00ಕ್ಕೆ ಲಘು ಉಪಹಾರ ಬಳಿಕ 8.30ಕ್ಕೆ ಸತ್ಯನಾರಾಯಣ ಪೂಜೆ ಪ್ರಾರಂಭವಾಗಲಿದೆ. ಪೂರ್ವಾಹ್ನ ಗಂಟೆ 10:30ಕ್ಕೆ ಮಂಗಳಾರತಿ ಬಳಿಕ 11.00ಕ್ಕೆ ಸಭಾ ಕಾಠ್ಯಕ್ರಮ ಪ್ರಾರಂಭವಾಗಲಿದೆ. ಮಧ್ಯಾಹ್ನ 12:30ಕ್ಕೆ ಪ್ರಸಾದ ವಿತರಣೆ ನಡೆದು 1.00ಕ್ಕೆ ಅನ್ನ ಸಂತರ್ಪಣೆ ನಡೆದು ಅಪರಾಹ್ನ 2.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಒಡಿಯೂರು ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬಂಟರ ಸಂಘ ಕುಳ-ಕುಂಡಡ್ಕ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪಿಲಿಂಜ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ, ಬಂಟರ ಸಂಘ ಬಂಟ್ವಾಳ ತಾಲೂಕು (ರಿ.) ಅಧ್ಯಕ್ಷ ಜಗನ್ನ್‌ಆಥ ಚೌಟ, ವಲಯ ಬಂಟರ ಸಂಘ ವಿಟ್ಲ ವಲಯ ಅಧ್ಯಕ್ಷ ರಾಜೀವ ಭಂಡಾರಿ, ಪುತ್ತೂರು ವಕೀಲರ ಸಂಘ ಅಧ್ಯಕ್ಷ, ನೋಟರಿ ವಕೀಲ ಜಗನ್ನಾಥ ರೈ ಜಿ, ಬಂಟರ ಸಂಘ ಬಂಟ್ವಾಳ ತಾಲೂಕು (ರಿ.) ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕಲ್ಲಂದಡ್ಕ ಮುಖ್ಯ ಅಭ್ಯಾಗತರಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.









