Friday, May 17, 2024
spot_imgspot_img
spot_imgspot_img

ವಿಟ್ಲ: (ಫೆ.12 – 13) ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಜಾತ್ರಾ ಮಹೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಇತಿಹಾಸ ಪ್ರಸಿದ್ಧ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.12ರಿಂದ 13 ರವರೆಗೆ ಜಾತ್ರಾ ಮಹೋತ್ಸವವು ನಡೆಯಲಿದೆ.

ಫೆ.5ರ ಶನಿವಾರದಂದು ಬೆಳಗ್ಗೆ 9.00ಕ್ಕೆ: ಗೊನೆ ಮುಹೂರ್ತ ಹಾಗೂ ಫೆ.11ರ ಶುಕ್ರವಾರದಂದು ರಾತ್ರಿ ಗಂಟೆ 7.30ಕ್ಕೆ ಜಾತ್ರೋತ್ಸವದ ಪ್ರಯುಕ್ತ ನಡೆಯುವ ಶ್ರೀ ರಂಗಪೂಜೆಯು ನಡೆಯಲಿದೆ.

ಫೆ.12ರ ಶನಿವಾರ ಪೂರ್ವಾಹ್ನ 8.30ಕ್ಕೆ : ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಮೂಲಸ್ಥಳ ಕುಂಡಡ್ಕ ಬದಿಕೆರೆಯಿಂದ ಕಲಶ ತರಲಾಗುವುದು. 9.00 ಗಂಟೆಗೆ ಕಂಪ ಬನತ್ತಡಿ ಶ್ರೀ ನಾಗದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಪ್ರಯುಕ್ತ ಹಾಲು ಅಭಿಷೇಕ, ತಂಬಿಲ ಮತ್ತು ಆಶ್ಲೇಷ ಬಲಿ ಬಳಿಕ ನವಕ ಪ್ರಧಾನ ಕಲಶ, ಗಣಪತಿ ಹೋಮ,ಬಳಿಕ ಮಾತೆಯರಿಂದ ಕುಂಕುಮಾರ್ಚನೆ, ಹಾಗೂ ಮಧ್ಯಾಹ್ನ 12:00ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ, ಸಂಜೆ 6.00ಕ್ಕೆ: ಶ್ರೀ ದುರ್ಗಾ ಪೂಜೆ, ನಿತ್ಯಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ ಗಂಟೆ 8.30ಕ್ಕೆ: ಶ್ರೀ ದೇವರ ಬಲಿ ಉತ್ಸವ, ಕಟ್ಟೆಪೂಜೆ ನಡೆಯಲಿದೆ.

ಫೆ.12ರ ಶನಿವಾರ ರಾತ್ರಿ 7.30ಕ್ಕೆ ಶ್ರೀ ದೇವಿ ಭಕ್ತವೃಂದ ಬೊಂದೇಲ್ ಮಂಗಳೂರು – ಇವರಿಂದ “ಭಕ್ತಿ ಸಂಗೀತ ಸೇವಾ ಕಾರ್ಯಕ್ರಮ” ಹಾಗೂ ಸಂಜೆ 6.00 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ನಾಳ ಇವರಿಂದ “ಶ್ರೀ ಕ್ಷೇತ್ರ ಬಪ್ಪನಾಡು ಮಹಾತ್ಮೆ” ಯಕ್ಷಗಾನ ಬಯಲಾಟ ನಡೆಯಲಿದೆ.

ದಿನಾಂಕ 13-02-2022ನೇ ಆದಿತ್ಯವಾರ ಬೆಳಗ್ಗೆ 9.30 ಗಂಟೆಗೆ ಶ್ರೀ ದೇವರ ಬಲಿ ಉತ್ಸವ, 11.00 ಗಂಟೆಗೆ : ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ಮಧ್ಯಾಹ್ನ 12:00 ಗಂಟೆಗೆ ಮಹಾಮಂಗಳಾರತಿ, ಮಂತಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!