Wednesday, April 24, 2024
spot_imgspot_img
spot_imgspot_img

ಕುಂದಾಪುರ: ಫ್ಲೈಓವರ್‌ ನಲ್ಲಿ ಕಾರಿನ ಚಕ್ರ ಸ್ಪೋಟಗೊಂಡು ಅಪಘಾತ: ಓರ್ವ ಮಹಿಳೆ ಮೃತ್ಯು!

- Advertisement -G L Acharya panikkar
- Advertisement -

ಕುಂದಾಪುರ: ಫ್ಲೈಓವರ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಕಾರೊಂದು ಅಪಘಾತಕ್ಕೀಡಾದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಬೈಂದೂರಿನ ಬಂಟವಾಡಿಯ ವಸಂತಿ(35) ಎಂದು ಗುರುತಿಸಲಾಗಿದೆ. ಸಾಸ್ತಾನದಿಂದ ಹಟ್ಟಿಕುದ್ರುಗೆ ಹೋಗುತ್ತಿದ್ದ ಕಾರು, ಟಯರ್ ಸ್ಪೋಟಗೊಂಡ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಿಂದ ಗಂಭೀರ ಗಾಯಗೊಂಡ ವಸಂತಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಕಾರಿನಲ್ಲಿ ಒಟ್ಟು ಐವರಿದ್ದು, ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!