Saturday, June 6, 2026
spot_imgspot_img
spot_imgspot_img

ಕುಂದಾಪುರ : ಯುವಕನೋರ್ವ ಮಲಗಿದ ಸ್ಥಿತಿಯಲ್ಲಿ ಮೃತ್ಯು

- Advertisement -
- Advertisement -

ಕುಂದಾಪುರ : ಯುವಕನೋರ್ವ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ಫೆರಿ ರಸ್ತೆಯ ಅಪಾರ್ಟ್‌‌ಮೆಂಟ್ ಒಂದರಲ್ಲಿ ನಡೆದಿದೆ.

ರೋಚನ ಕುಮಾರ್‍ (18) ಮೃತ ಯುವಕ ಎಂದು ತಿಳಿದುಬಂದಿದೆ. ಬ್ರಹ್ಮಾವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು, ಮನೆಯ ಹಾಲ್‌ನಲ್ಲಿ ಅಂಗಾತ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಬಾಯಿಯಿಂದ ಕಂದು ಬಣ್ಣದ ದ್ರವ ಹೊರಗೆ ಬಂದಿತ್ತು. ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು , ಯಾರೊಂದಿಗೂ ಮಾತನಾಡದೆ ಮೌನಿಯಾಗಿರುತ್ತಿದ್ದರು ಅವರು ಮನೆಯೊಳಗೆ ಅಸಹಜವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕೌನ್ಸೆಲಿಂಗ್ ಮಾಡಲಾಗಿತ್ತು. ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!