Wednesday, April 24, 2024
spot_imgspot_img
spot_imgspot_img

*ಲಡಾಖ್​ ವಾಯುಪ್ರದೇಶದಲ್ಲಿ ರಫೇಲ್​ ಯುದ್ಧವಿಮಾನಗಳು ಹಾರಾಟ*

- Advertisement -G L Acharya panikkar
- Advertisement -

ಭಾರತ-ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನತೆ ದಿನೇದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಡಾಖ್​ ವಾಯುಪ್ರದೇಶದಲ್ಲಿ ರಫೇಲ್​ ಯುದ್ಧವಿಮಾನಗಳು ಹಾರಾಟ ನಡೆಸಿವೆ.

ಕಳೆದ ಐದು ತಿಂಗಳಿಂದ ಭಾರತ ಹಾಗೂ ಚೀನಾ ಮಧ್ಯೆ ಗಡಿ ಬಿಕ್ಕಟು ಉಂಟಾಗಿದೆ. ಇದರ ನಡುವೆಯೇ ರಫೇಲ್​ ಯುದ್ಧ ವಿಮಾನಗಳು ಲಡಾಖ್​ನಲ್ಲಿ ಹಾರಾಟ ನಡೆಸುವ ಮೂಲಕ ಭಾರತ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಅನ್ನೋ ಸ್ಪಷ್ಟ ಸಂದೇಶವನ್ನ ಚೀನಾ ರಾಷ್ಟ್ರಕ್ಕೆ ರವಾನಿಸಿದೆ.

ಕಳೆದ ಜುಲೈನಲ್ಲಿ ಫ್ರಾನ್ಸ್​ನಿಂದ ಬಂದಿಳಿದ ಐದು ರಫೇಲ್​ ಜೆಟ್​​ಗಳನ್ನ, ಸೆಪ್ಟೆಂಬರ್​​ 10ರಂದು ಸೇನೆಗೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಇದರ ಬೆನ್ನಲ್ಲೇ ಇತ್ತೀಚೆಗೆ ಪೈಲೆಟ್​ಗಳು ಅಂಬಾಲಾ ವಾಯುನೆಲೆಯಿಂದ ಲಡಾಖ್​ವರೆಗೂ ಹಾರಾಟ ನಡೆಸಿ, ರಫೇಲ್​ ವಿಮಾನಗಳ ಕಾರ್ಯಾಚರಣೆಗೆ ಅಲ್ಲಿನ ವಾತಾವರಣದ ಪರಿಚಯ ಮಾಡಿಕೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!