Thursday, April 25, 2024
spot_imgspot_img
spot_imgspot_img

ಕೊನೆಗೂ ವಧು ಸಿಕ್ಕ ಖುಷಿಯಲ್ಲಿದ್ದಾನೆ ಕಿಲಾಡಿ ಕುಳ್ಳ

- Advertisement -G L Acharya panikkar
- Advertisement -

ಲಕ್ನೋ: ವಧು ಸಿಗುತ್ತಿಲ್ಲ ಎಂದು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದ ಯುವಕನಿಗೆ ಕೊನೆಗೂ ಒಬ್ಬ ವಧು ಸಿಕ್ಕಿದ್ದಾಳೆ.


ಅಜೀಮ್(26) ನನಗೆ ಮದುವೆಯಾಗಲೂ ವಧು ಸಿಗುತ್ತಿಲ್ಲ ಎಂದು ಪೊಲೀಸ್ ಠಾಣೆಯ ಮೊರೆಹೋಗಿದ್ದನು. ಆದರೆ ಇದೀಗ 2 ಅಡಿ ಇರುವ ಅಜೀಮ್ ಅವರಿಗೆ ಅವರಷ್ಟೇ ಎತ್ತರ ಇರುವ ವಧು ಸಿಕ್ಕಿದ್ದಾಳೆ. ಈ ವಿಚಾರವಾಗಿ ಅಜೀಮ್ ಸಂತೋಷ ಪಟ್ಟಿದ್ದಾರೆ.

ಘಾಜಿಯಾಬಾದ್ ಬಳಿ ಗ್ರಾಮವೊಂದರ ಕುಟುಂಬಕ್ಕೆ ಅಜೀಮ್ ವಧುವನ್ನು ಹುಡುಕುತ್ತಿರುವ ವಿಚಾರ ತಿಳಿದಿದೆ. ರಹಾನಾ ಕುಟುಂಬದವರು ಅಜೀಮ್ ಕುಟುಂಬದೊಂದಿಗೆ ಮಾತನಾಡಿದ್ದಾರೆ. ವಧು-ವರರ ಮನೆಯವರು ಬಹುತೇಕ ಮದುವೆಗೆ ಒಪ್ಪಿಗೆ ನೀಡಿದ್ದಾರೆ.

ರಹನಾ(25)ಗೆ ಮನೆಯಲ್ಲಿ ಕೆಲವು ವರ್ಷಗಳಿಂದ ವರನನ್ನು ನೋಡುತ್ತಿದ್ದರು. ಇದೀಗ ಅಜೀಮ್ ಸಿಕ್ಕಿರುವುದು ಕುಟುಂಬಸ್ಥರಿಗೆ ಸಂತೋಷವಾಗಿದೆ. ಅಜೀಮ್ ಹೌಸ್‍ವೈಫ್ ಸಿಕ್ಕಂತಾಗಿದೆ ಎಂದು ಪೊಲೀಸರಲ್ಲಿ ಸಂತೋಷವನ್ನು ಹಂಚಿಕೊಂಡಿದ್ದಾನೆ.

- Advertisement -

Related news

error: Content is protected !!