Monday, November 9, 2026
spot_imgspot_img
spot_imgspot_img

ಕೊರೊನಾ ಸೋಂಕು ಹೆಚ್ಚಳ: 11 ರಾಜ್ಯಗಳ ಸಿಎಂ ಗಳ ಜೊತೆ ಪ್ರಧಾನಿ ಮೋದಿ ಸಭೆ- ಮೋದಿ ಹೇಳಿದ್ದೇನು..?

- Advertisement -
- Advertisement -

ನವದೆಹಲಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, 11 ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಿದರು.

ಸಭೆಯಲ್ಲಿ ಸಿಎಂಗಳ ಜೊತೆ ರಾಜ್ಯದಲ್ಲಿನ ಕೊರೊನಾ ಸ್ಟೇಟಸ್​ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಮೋದಿ ಹೇಳಿದ್ದೇನು..?

  • ಕೊರೊನಾ ಹೆಚ್ಚಳದಿಂದಾಗಿ ಮತ್ತೆ ನಮಗೆ ಸವಾಲ್​​ ಎದುರಾಗಿದೆ
  • ಕೊರೊನಾ ಎದುರಿಸಲು ನಿಮ್ಮೆಲ್ಲರ ಸಲಹೆಯನ್ನ ನಾನು ಈ ಸಂದರ್ಭದಲ್ಲಿ ಕೇಳುತ್ತೇನೆ ಕೊರೊನಾ ತಡೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ.
  • ಕೊರೊನಾ ತಡೆಗಟ್ಟಲು ಸಮರೋಪಾದಿಯಲ್ಲಿ ಕೆಲಸ ಮಾಡುವುದು ಅವಶ್ಯಕ
  • ಎಲ್ಲಾ ಸವಾಲುಗಳ ಹೊರತಾಗಿಯೂ, ನಮಗೆ ಹಿಂದೆಂದಿಗಿಂತಲೂ ಉತ್ತಮ ಅನುಭವ ಮತ್ತು ಸಂಪನ್ಮೂಲಗಳಿವೆ, ನಮ್ಮಲ್ಲಿ ಲಸಿಕೆ ಕೂಡ ಇದೆ
  • ಮಹಾರಾಷ್ಟ್ರ, ಗುಜರಾತ್, ಛತ್ತೀಸ್​​ಗಢ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದೆ ಮೊದಲನೇ ಅಲೆಯಂತೆ ಕೊರೊನಾ ಪ್ರಕರಣ ಹೆಚ್ಚುತ್ತಿದೆ, ಈ ಬಗ್ಗೆ ನಾವು ಎಚ್ಚರ ವಹಿಸಬೇಕಿದೆ
  • ಇಂತಹ ತುರ್ತು ಸಂದರ್ಭವನ್ನ ನಾವು ಸವಾಲ್​​ ಆಗಿ ಸ್ವೀಕಾರ ಮಾಡಬೇಕಿದೆCOVID19 ಪರೀಕ್ಷೆಗೆ ಒತ್ತು ನೀಡುವಂತೆ ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ, 70% ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡುವುದು ನಮ್ಮ ಗುರಿಯಾಗಬೇಕು
  • ಕೊರೊನಾ ಪರೀಕ್ಷೆಯನ್ನ ಗರಿಷ್ಠ ಮಟ್ಟದಲ್ಲಿ ಮಾಡಬೇಕಿದೆ. ಸರಿಯಾದ ಮಾದರಿಯಲ್ಲಿ ಸಂಗ್ರಹ ಮಾಡೋದು ಬಹಳ ಮುಖ್ಯ.
  • ಕೊರೊನಾದ 2ನೇ ಅಲೆ ಅಪಾಯಕಾರಿ; ಶೇ. 70 RTPCR ಪರೀಕ್ಷೆ ಗುರಿಯಾಗಲಿಕೊರೊನಾ ಸೋಂಕು ತಡೆಯುವ ಮಾರ್ಗ ಅದುವೇ ಅದನ್ನು ಪತ್ತೆ ಹಚ್ಚುವಿಕೆ ಮತ್ತು ಟ್ರ್ಯಾಕಿಂಗ್​ಗೆ ಹೆಚ್ಚು ಒತ್ತು ನೀಡಬೇಕು
  • ಕಂಟೋನ್ಮೆಂಟ್​ ಝೋನ್​ ಮತ್ತು ಸೂಕ್ಷ್ಮ ವಲಯಗಳತ್ತ ನಾವು ಗಮನ ಹರಿಸಬೇಕು. ನೈಟ್​ ಕರ್ಫ್ಯೂ ವಿಧಿಸಲಾಗಿರುವ ಸ್ಥಳಗಳಲ್ಲಿ ಕೊರೊನಾ ವೈರಸ್​ ಬಗ್ಗೆ ಜಾಗೃತರಾಗಿರಬೇಕು
  • ಕೊರೊನಾ ವಿರುದ್ಧದ ಜಾಗರೂಕತೆಯನ್ನ ಮುಂದುವರಿಸಲು ನಾನು ಕೊರೊನಾ ಕರ್ಫ್ಯೂ ಪದವನ್ನ ಬಳಸಲು ಒತ್ತಾಯಿಸುತ್ತೇನೆ
  • ರಾತ್ರಿ 9 ಅಥವಾ ರಾತ್ರಿ 10 ರಿಂದ ಬೆಳಗ್ಗೆ 5 ಅಥವಾ 6 ರವರೆಗೆ ಕರ್ಫ್ಯೂ ಸಮಯವನ್ನು ಪ್ರಾರಂಭಿಸುವುದು ಉತ್ತಮ, ಜಾಗೃತಿಗಾಗಿ ನೈಟ್​ ಕರ್ಫ್ಯೂವನ್ನ, ಕೊರೊನಾ ಕರ್ಫ್ಯೂ ಎಂದೇ ಬಳಸೋದು ಸೂಕ್ತ
  • ಸಂಪೂರ್ಣ ಲಾಕ್​ಡೌನ್ ಅಗತ್ಯ ಇಲ್ಲ, ಏಪ್ರಿಲ್ 11 ರಿಂದ 14ರವರೆಗೆ ವ್ಯಾಕ್ಸಿನ್ ಉತ್ಸವವನ್ನ ಆಚರಿಸಿ
  • ಎಲ್ಲಾ ರಾಜ್ಯಗಳ ಸಿಎಂ ಜೊತೆಗಿನ ಚರ್ಚೆಯಲ್ಲಿ ಸಾವಿನ ಪ್ರಮಾಣದ ಬಗ್ಗೆ ಚರ್ಚೆ ಮಾಡಲಾಯಿತು, ಸಾವಿನ ಪ್ರಮಾಣವನ್ನ ಮತ್ತಷ್ಟು ಕಡಿಮೆ ಮಾಡಲು ಚರ್ಚೆ ನಡೆಯಿತು
  • ದೇಶದ ಸೆಲೆಬ್ರಿಟಿಗಳು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕೊರೊನಾ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಬೇಕು
- Advertisement -

Related news

error: Content is protected !!