Sunday, June 21, 2026
spot_imgspot_img
spot_imgspot_img

ನಿರ್ಜನ ಪ್ರದೇಶಕ್ಕೆ ಮಹಿಳೆಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ

- Advertisement -
- Advertisement -

ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ಭಯಾನಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ 30ರ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕಾಮುಕರು ವಿಕೃತಿ ಮೆರೆದಿದ್ದಾರೆ.

ಕಾಜಿಯಾಬಾದ್‍ನ ಲಾಲ್ ಕೌನ್ ಬಳಿ ಬುಧವಾರ ರಾತ್ರಿ ಘಟನೆ ನಡೆದಿದ್ದು, 30 ವರ್ಷದ ಮಹಿಳೆ ಮೇಲೆ ಮೂವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ. ಮಹಿಳೆ ಗಾಜಿಯಾಬಾದ್‍ನ ತನ್ನ ಆಫೀಸ್‍ನಿಂದ ನೋಯ್ಡಾದಲ್ಲಿರುವ ಮನೆಗೆ ತರಳುತ್ತಿದ್ದಾಗ ಘಟನೆ ನಡೆದಿದ್ದು, ದಾರಿ ಮಧ್ಯೆ ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ.

ಮಹಿಳೆ ಗಾಜಿಯಾಬಾದ್‍ನ ಲಾಲ್ ಕೌನ್‍ನಿಂದ ಆಟೋದಲ್ಲಿ ಮನೆಗೆ ತೆರಳುತ್ತಿರುವಾಗ ಆರೋಪಿ ಆಟೋ ಚಾಲಕ ಹಾಗೂ ಆತನ ಇಬ್ಬರು ಸ್ನೇಹಿತರು ಸೇರಿ ಅಪಹರಿಸಿ, ಅತ್ಯಾಚಾರ ಎಸಗಿದ್ದಾರೆ. ಬಳಿಕ ಆರೋಪಿಗಳು ಮಹಿಳೆಯನ್ನು ಹಾಪುರ ಜಿಲ್ಲೆಯ ಪಿಲ್ಖುವಾ ಪ್ರದೇಶದಲ್ಲಿ ರಾತ್ರೋರಾತ್ರಿ ಎಸೆದು ಪರಾರಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಲ್ಖುವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆ ನೋಯ್ಡಾ ಮೂಲದವಳಾಗಿದ್ದು, ಗಾಜಿಯಾಬಾದ್‍ನ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದಳು. ಮಹಿಳೆ ಲಾಲ್‍ಕೌನ್ ಬಳಿ ಆಟೋ ಹತ್ತಿದ್ದು, ಅಲ್ಲಿಂದ ಅಪಹರಿಸಲಾಗಿದೆ. ಆಟೋ ಡ್ರೈವರ್ ತನ್ನ ಇಬ್ಬರು ಸಹಚರರೊಂದಿಗೆ ಮಹಿಳೆಯನ್ನು ಸೆರೆಯಲ್ಲಿಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಮಹಿಳೆಯನ್ನು ಪಿಲ್ಖುವಾದ ಗಲಂದ್ ಗ್ರಾಮದ ಬಳಿ ಎಸೆದು ಹೋಗಿದ್ದಾರೆ.

ಗಾಜಿಯಾಬಾದ್‍ನ ಮಸೂರಿ ಪೊಲೀಸ್ ಠಾಣೆಯಲ್ಲಿರುವ ನಮ್ಮ ಸಹವರ್ತಿಗಳಿಂದ ಗುರುವಾರ ಬೆಳಗಿನ ಜಾವ 3ಗಂಟೆ ಸುಮಾರಿಗೆ ಘಟನೆ ಬಗ್ಗೆ ಪೊಲೀಸ್ ಕಂಟ್ರೋಲ್ ರೂಂ ಎಚ್ಚರಿಸಿತು. ಕೂಡಲೇ ಎಫ್‍ಐಆರ್ ದಾಖಲಿಸಿ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ವರದಿಯಲ್ಲಿ ಹಾಪುರ ಹೆಚ್ಚುವರಿ ಎಸ್‍ಪಿ ಸರ್ವೇಶ್ ಮಿಶ್ರಾ ವಿವರಿಸಿದ್ದಾರೆ.

- Advertisement -

Related news

error: Content is protected !!