Sunday, September 13, 2026
spot_imgspot_img
spot_imgspot_img

ರೀಲ್ಸ್ ಮೂಲಕ ಜನರ ಮನಗೆದ್ದಿದ್ದ ಲಕ್ಷ್ಮಿ ಅಜ್ಜಿ ಇನ್ನಿಲ್ಲ!

- Advertisement -
- Advertisement -

ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊಮ್ಮಗನ ಜೊತೆ ರೀಲ್ಸ್ ಮಾಡಿ ತಮ್ಮ ಮುಗ್ಧ ನಟನೆಯಿಂದ ಜನರ ಮನಗೆದ್ದು, ಇಡೀ ಕರುನಾಡನ್ನು ನಗಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ‘ರೀಲ್ಸ್ ಅಜ್ಜಿ’ ಲಕ್ಷ್ಮಿ ನಾಯ್ಕ್(92) ಅವರು ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ತಮ್ಮ ಮೊಮ್ಮಗ, ‘ಡ್ರಾಮಾ ಜ್ಯೂನಿಯರ್’ ಖ್ಯಾತಿಯ ಸೂರಜ್ ಅವರೊಂದಿಗೆ ಇನ್ನಾ ಗ್ರಾಮ್ ರೀಲ್ಸ್ ಗಳಲ್ಲಿ ನಟಿಸುವ ಮೂಲಕ ಲಕ್ಷ್ಮೀ ಅಜ್ಜಿ ಕರ್ನಾಟಕದ ಮನೆಮಾತಾಗಿದ್ದರು. ಕಿವಿ ಕೇಳದಿದ್ದರೂ ಮತ್ತು ಕಣ್ಣು ಮಂಜಾಗಿದ್ದರೂ ಸಹ ತಮ್ಮ ಮುಗ್ಧ ನಟನೆಯ ಮೂಲಕ ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದರು. ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಅಜ್ಜಿಯ ಅಗಲಿಕೆಯಿಂದ ಸೂರಜ್ ಕುಟುಂಬ ಮತ್ತು ಅವರ ಲಕ್ಷಾಂತರ ಅಭಿಮಾನಿ ವರ್ಗ ಶೋಕ ಸಾಗರದಲ್ಲಿ ಮುಳುಗಿದೆ. ತಮ್ಮ 92ನೇ ವಯಸ್ಸಿನಲ್ಲೂ ಯುವಜನತೆಗೆ ಮಾದರಿಯಾಗಿ ಬದುಕಿದ ಲಕ್ಷ್ಮೀ ಅಜ್ಜಿ, ಕನ್ನಡಿಗರ ಮನಸ್ಸಿನಲ್ಲಿ ಎಂದೆಂದಿಗೂ ಅಮರರಾಗಿರುತ್ತಾರೆ.

ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಇಂದು (ಮಾ.29) ಯಲ್ಲಾಪುರದಲ್ಲಿ ಧಾರ್ಮಿಕ ವಿಧಿ ಪ್ರಕಾರ ಅವರ ಅಂತ್ಯಕ್ರಿಯೆ ನೆರವೇರಿತು ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!