Thursday, March 28, 2024
spot_imgspot_img
spot_imgspot_img

ಲಿಬಿಯಾದಲ್ಲಿ ಅಪಹರಣಕ್ಕೀಡಾಗಿದ್ದ ಭಾರತೀಯರು ಸುರಕ್ಷಿತರಾಗಿ ಬಿಡುಗಡೆ

- Advertisement -G L Acharya panikkar
- Advertisement -

ಟ್ರಿಪೋಲಿ: ಲಿಬಿಯಾದಲ್ಲಿ ಅಪಹರಣಕ್ಕೀಡಾಗಿದ್ದ 7 ಭಾರತೀಯರು ಸುರಕ್ಷಿತರಾಗಿ ಬಿಡುಗಡೆಗೊಂಡಿದ್ದಾರೆ.
ತುನಿಷಿಯಾದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ ಪುನೀರ್ ರಾಯ್ ಕುಂಡಲ್ ಈ ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶ, ಬಿಹಾರ, ಗುಜರಾತ್, ಉತ್ತರಪ್ರದೇಶ ಮೂಲದವರಾದ 7 ಭಾರತೀಯರು ಲಿಬಿಯಾದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಸುತ್ತಿದ್ದರು. ಸೆಪ್ಟೆಂಬರ್ 14 ರಂದು ಭಾರತಕ್ಕೆ ಮರಳಲು ಟ್ರಿಪೋಲಿಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಅಶ್ವೆರಿಫ್ ಎಂಬ ಸ್ಥಳದಲ್ಲಿ ಅಪಹರಿಸಲಾಗಿತ್ತು.

ಲಿಬಿಯಾದಲ್ಲಿ ಭಾರತೀಯ ರಾಯಭಾರಿ ಕಚೇರಿಯಿಲ್ಲ. ಹೀಗಾಗಿ ಲಿಬಿಯಾದಲ್ಲಿ ಭಾರತೀಯರ ಕುರಿತು ತುನಿಷಿಯಾದ ರಾಯಭಾರಿ ಅಧಿಕಾರಿಗಳೇ ನಿಗಾ ವಹಿಸಲಿದ್ದಾರೆ.

- Advertisement -

Related news

error: Content is protected !!