ಗುವಾಹಟಿ: ಲವ್ ಜಿಹಾದ್ (Love Jihad) ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಶೀಘ್ರ ಜಾರಿಗೆ ತರಲಾಗುವುದು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಅಸ್ಸಾಂನಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರಲು ನಮ್ಮ ಸರ್ಕಾರ ಚಿಂತಿಸಿದೆ ಎಂದು ಹೇಳಿದ್ದಾರೆ. ಆ ಮೂಲಕ ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಬಳಿಕ ಇದೀಗ ಅಸ್ಸಾಂ ಸರ್ಕಾರ ಕಾನೂನು ತರಲು ಮುಂದಾಗಿದೆ.
ಬಹುತೇಕ ಬಿಜೆಪಿ ಆಡಳಿತದಲ್ಲಿ ರಾಜ್ಯಗಳಲ್ಲಿ ಬಲವಂತದ ಮತಾಂತರದ ವಿರುದ್ಧ ಕಾನೂನುಗಳಿದ್ದರೂ, ಶಿಕ್ಷೆಯ ನಿಬಂಧನೆಗಳನ್ನು ಇನ್ನಷ್ಟು ಕಠಿಣಗೊಳಿಸಲು ಯೋಜನೆಗಳು ಜಾರಿಯಲ್ಲಿವೆ.
ಲವ್ ಜಿಹಾದ್ ವಿರುದ್ಧ ರಾಜ್ಯದಲ್ಲಿ ಮೊದಲು ಉತ್ತರ ಪ್ರದೇಶ ಕಾನೂನು ರೂಪಿಸಿತು. ಪ್ರತಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿರುವ ಕಾನೂನುಬಾಹಿರ ಮತಾಂತರ ನಿಷೇಧ (ತಿದ್ದುಪಡಿ) ಮಸೂದೆ 2024 ಅನ್ನು ಪರಿಷ್ಕರಿಸಲು ಯೋಜಿಸಿದೆ. ಸಮಾಜವಾದಿ ಪಕ್ಷವು ಇದನ್ನು ವಿಭಜಕ ಕ್ರಮವೆಂದು ಕರೆದಿದ್ದು, ಸಮಾಜವಾದಿ ಪಕ್ಷವು ಇದನ್ನು ವಿಭಜಕ ನಡೆ ಎಂದು ಹೇಳಿದೆ.
ಲವ್ ಜಿಹಾದ್ ವಿರುದ್ಧ ಕಾನೂನಿನೊಂದಿಗೆ ಶೀಘ್ರದಲ್ಲೇ ಹೊಸ ವಸತಿ ನೀತಿಯನ್ನು ಪರಿಚಯಿಸಲಾಗುವುದು. ಆ ಮೂಲಕ ಅಸ್ಸಾಂನಲ್ಲಿ ಜನಿಸಿದವರು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. ಅಲ್ಲದೆ ಮುಸ್ಲಿಂ ವ್ಯಕ್ತಿಯು ಹಿಂದೂಗಳ ಅಥವಾ ಹಿಂದೂ ವ್ಯಕ್ತಿ ಮುಸ್ಲಿಂರ ಭೂಮಿಯನ್ನು ಖರೀದಿಸಲು ಬಯಸಿದರೆ ಮೊದಲು ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಈ ತಿಂಗಳ ಕೊನೆಯಲ್ಲಿ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಈ ಹೊಸ ಕಾನೂನುಗಳನ್ನು ತರುವ ಸಾಧ್ಯತೆ ಇದೆ ಎಂದು ಶರ್ಮಾ ತಿಳಿಸಿದ್ದಾರೆ.