Wednesday, December 4, 2024
spot_imgspot_img
spot_imgspot_img

ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವಿಟ್ಲ, ಟೋಪ್ಕೋ ಜ್ಯುವೆಲ್ಲರಿ ವಿಟ್ಲ ಮತ್ತು ಪುತ್ತೂರು ಸಹಯೋಗದೊಂದಿಗೆ ‘ಕೋವಿಡ್-19’ ನಿರ್ವಹಣೆ: ಸಾಮಾಜಿಕ ಕಾರ್ಯಕರ್ತರಿಗೆ ‘ತರಬೇತಿ ಶಿಬಿರ’ಜುಲೈ 09ರಂದು..

- Advertisement -
- Advertisement -

ವಿಟ್ಲ: ಕೊರೊನಾ ವೈರಾಣು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮಾಜದಲ್ಲಿ ಆತಂಕ ಮನೆ ಮಾಡಿದೆ. ಈ ಸಂದರ್ಭದಲ್ಲಿ ಕೋವಿಡ್-19 ನಿರ್ವಹಣೆ ಕುರಿತಂತೆ ಸಮಾಜದಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಾಗಿದ್ದು,  ಈ ಹಿನ್ನೆಲೆಯಲ್ಲಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್ ವಿಟ್ಲ,ಟೋಪ್ಕೋ ಜ್ಯುವೆಲ್ಲರಿ ವಿಟ್ಲ ಮತ್ತು ಪುತ್ತೂರು ಸಹಯೋಗದೊಂದಿಗೆ ಕೋವಿಡ್-19 ನಿರ್ವಹಣೆ ಕುರಿತಂತೆ ಕಾರ್ಯಾಗಾರ ಇದೇ 09ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ವರಗೆ ಒಕ್ಕೆತ್ತೂರು ಲಯನ್ಸ್ ಕ್ಲಬ್ ಕಛೇರಿಯಲ್ಲಿ ನಡೆಯಲಿದೆ.

ಲಯನ್ಸ್ ಜಿಲ್ಲೆ 317 ಡಿ  ಜಿಲ್ಲಾ ಗವರ್ನರ್ ಡಾ|ಗೀತಪ್ರಕಾಶ್ ಸಾಮಾಜಿಕ ಕಾರ್ಯಕರ್ತ ಉಮರ್ ಯು.ಎಚ್., ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ  ಆರೋಗ್ಯಾಧಿಕಾರಿ ಡಾ. ವೇದಾವತಿ, ಟೋಪ್ಕೋ ಜ್ಯುವೆಲ್ಲರಿಯ ಪಾಲುದಾರ ಮಹಮ್ಮದ್ ಟಿ.ಕೆ. ಭಾಗವಹಿಸಲಿದ್ದಾರೆ. ಲಯನ್ಸ್ ಕ್ಲಬ್ ಅಧ್ಯಕ್ಷೆ ಜೆಸಿಂತಾ ಸೋಫಿಯಾ ಮಸ್ಕರೇಞಸ್ ಅಧ್ಯಕ್ಷತೆ ವಹಿಸಲಿದ್ದಾರೆ.

ಶಿಬಿರದಲ್ಲಿ ಜನಜಾಗೃತಿಯ ಅಗತ್ಯತೆ ಮತ್ತು ವಿಧಾನಗಳು, ಮುಂದಿನ ಸವಾಲುಗಳು, ’ಒತ್ತಡ ನಿರ್ವಹಣೆ’ಯ ಕೌನ್ಸಿಲಿಂಗ್, ಸರಕಾರದ ಯೋಜನೆಗಳು ಹಾಗೂ ಕೊರೊನ ಸೋಂಕಿತರ ನಿರ್ವಹಣೆ ಮತ್ತು ಮೃತರ ಅಂತ್ಯಸಂಸ್ಕಾರ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳಿಂದ, ವೈದ್ಯರಿಂದ ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.

ಮೊದಲು ಹೆಸರು ನೋಂದಾಯಿಸುವ 30 ಮಂದಿಗೆ ಮಾತ್ರ ಅವಕಾಶ.

ಆಸಕ್ತರು +919008857506 ಅಥವಾ +919900802040 ಈ ನಂಬ್ರವನ್ನು ಸಂಪರ್ಕಿಸಿ ಹೆಸರು, ಊರು, ಮೊಬೈಲ್ ನಂಬ್ರವನ್ನು ನೋಂದಾಯಿಸಬಹುದು.

ಎರಡು ತಾಸಿನ ಕಾರ್ಯಾಗಾರಕ್ಕೆ ಸಮಯಕ್ಕೆ 15 ನಿಮಿಷ ಮುಂಚಿತವಾಗಿ ಆಗಮಿಸಬೇಕು. ಸಮಯಾನುಸಾರ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!