Monday, May 20, 2024
spot_imgspot_img
spot_imgspot_img

ಬಿಎಂಟಿಸಿ ಬಸ್‌ ಹರಿದು ಎಲ್‌ಕೆಜಿ ಬಾಲಕಿ ಮೃತ್ಯು

- Advertisement -G L Acharya panikkar
- Advertisement -

ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಬಾಲಕಿಯ ಮೇಲೆ ಹರಿದು ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ಉತ್ತರಹಳ್ಳಿಯಲ್ಲಿ ನಡೆದಿದೆ.

ಪೂರ್ವಿ (4) ಸಾವನ್ನಪ್ಪಿದ ಶಾಲಾ ಬಾಲಕಿ. ತಂದೆ ಪ್ರಸನ್ನ ಎಂಬುವರು ಮಗಳನ್ನ ಶಾಲೆಗೆ ಬಿಡಲು ಬೈಕ್ ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಬೈಕ್ ಡಿಕ್ಕಿ ಹೊಡೆದಿದೆ. ಬಸ್​ ಡಿಕ್ಕಿ ರಭಸಕ್ಕೆ ಬೈಕ್​ ಚಾಲನೆ ಮಾಡುತ್ತಿದ್ದ ಬಾಲಕಿ ತಂದೆ ಎಡಬದಿ ಬಿದ್ದಿದ್ರೆ, ಬಾಲಕಿ ಬಲ ಬದಿ ಬಿದ್ದಿದ್ದಾಳೆ. ಪರಿಣಾಮ ಬಾಲಕಿ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಈ ಘಟನೆ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Insta: glacharyajewellers
Fb: glacharya
- Advertisement -

Related news

error: Content is protected !!