- Advertisement -
- Advertisement -
ವಿಟ್ಲ: ದ.ಕ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳನ್ನೊಳಗೊಂಡ ಅಂತರಾಷ್ಟ್ರೀಯ ಲಯನ್ಸ್‌ನ ೩೧೭ ಡಿ ಜಿಲ್ಲೆಯ ೨೦೨೦-೨೧ನೇ ಸಾಲಿನ ರಾಜ್ಯಪಾಲರಾಗಿ ನೇಮಕಗೊಂಡ ಡಾ. ಗೀತಪ್ರಕಾಶ್ ಅವರ ಪದಗ್ರಹಣ ಮಂಗಳವಾರ ಲಯನ್ಸ್‌ನ ಅಂತರಾಷ್ಟ್ರೀಯ ಅಧ್ಯಕ್ಷ ಡಾ. ಜಂಗ್ ಉಲ್ ಚೋಯಿ ಮೂಲಕ ನಡೆಯಿತು. ಲಯನ್ಸ್ ಕ್ಲಬ್‌ನಲ್ಲಿ ಕಳೆದ ೨೧ ವರ್ಷಗಳಿಂದ ನಾನಾ ಸ್ತರಗಳ ಹುದ್ದೆಗಳನ್ನು ಅಲಂಕರಿಸಿ, ನಿಭಾಯಿಸಿರುವ ವೈದ್ಯರಾದ ಡಾ. ಗೀತಪ್ರಕಾಶ್ ಜು.೧ ರಿಂದ ೨೦೨೧ ರ ಜೂನ್ ೩೦ ರ ತನಕ ಅವರು ರಾಜ್ಯಪಾಲರಾಗಿ ಹುದ್ದೆ ನಿರ್ವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ೨೦೨೦-೨೧ ನೇ ಸಾಲಿನ ಪ್ರಥಮ ಉಪ ರಾಜ್ಯಪಾಲರಾಗಿ ಬಂಟ್ವಾಳ ಲಯನ್ಸ್ ಕ್ಲಬ್ಬಿನ ವಸಂತ ಕುಮಾರ್ ಶೆಟ್ಟಿ ಆಯ್ಕೆಯಾದರು. ಸಕಲೇಶಪುರ ಲಯನ್ಸ್ ಕ್ಲಬ್ ಸಂಜೀತ್ ಶೆಟ್ಟಿ ಅವರನ್ನು ದ್ವಿತೀಯ ಉಪ ರಾಜ್ಯಪಾಲರಾಗಿ ಆಯ್ಕೆ ಮಾಡಲಾಯಿತು.


- Advertisement -