Tuesday, June 23, 2026
spot_imgspot_img
spot_imgspot_img

ಪ್ರೇಯಸಿಯನ್ನು ಕೊಲೆಗೈದು ಮೃತದೇಹವನ್ನು ಫ್ಲಾಟ್ ನ ಗೋಡೆಯಲ್ಲಿ ಬಚ್ಚಿಟ್ಟ ಪಾಪಿ ಪ್ರಿಯಕರ!

- Advertisement -
- Advertisement -

ಮುಂಬೈ: ಮದುವೆಯಾಗು ಎಂದು ಕೇಳಿದ ತಪ್ಪಿಗೆ ಪ್ರಿಯಕರನೋರ್ವ ತನ್ನ ಪ್ರೇಯಸಿಯನ್ನು ಕೊಲೆಗೈದು ತನ್ನ ಫ್ಲಾಟ್ ನ ಗೋಡೆಯಲ್ಲಿ ಮೃತದೇಹವನ್ನು ಬಚ್ಚಿಟ್ಟ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿ ಕಳೆದ ಐದು ವರ್ಷಗಳಿಂದಲೂ 32 ವರ್ಷದ ಮಹಿಳೆಯ ಜೊತೆಯಲ್ಲಿ ಸಂಬಂಧವನ್ನು ಹೊಂದಿದ್ದ. ಮಹಿಳೆ ಆಗಾಗ ಆರೋಪಿಯ ಜೊತೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಳು. ಆದರೆ ಅಕ್ಟೋಬರ್ 21ರ ನಂತರ ಮಹಿಳೆ ನಾಪತ್ತೆಯಾಗಿದ್ದಾಳೆ. ಈ ಕುರಿತು ಮಹಿಳೆಯ ಮನೆಯವರು ಆರೋಪಿಯ ಬಳಿಯಲ್ಲಿ ಕೇಳಿದಾಗ ಗುಜರಾತ್ ಗೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾನೆ.

ಮಹಿಳೆಯ ಪೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಮಹಿಳೆ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಈ ಕುರಿತು ಮಹಿಳೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಕೊನೆಯ ಬಾರಿಗೆ ಮಹಿಳೆ ಆರೋಪಿಯ ಜೊತೆಯಲ್ಲಿ ಕಾಣಿಸಿಕೊಂಡಿರುವ ಕುರಿತು ತಿಳಿಸಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಯನ್ನು ತನಿಖೆ ನಡೆಸಿದಾಗ ತಾನು ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಮಹಿಳೆಯ ಶವವನ್ನು ತನ್ನ ಪ್ಲ್ಯಾಟ್ ನ ಗೋಡೆಯಲ್ಲಿ ಹೂತಿಟ್ಟಿರುವುದಾಗಿಯೂ ಹೇಳಿಕೆ ನೀಡಿದ್ದಾನೆ.

ಪೊಲೀಸರು ಪ್ಲ್ಯಾಟ್ ನಲ್ಲಿ ಪರಿಶೀಲನೆ ನಡೆಸಿದಾಗ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಮಹಿಳೆ ತನ್ನನ್ನು ಮದುವೆಯಾಗು ವಂತೆ ಪದೇ ಪದೇ ಪೀಡಿಸುತ್ತಿದ್ದಳು. ಇದೇ ಕಾರಣಕ್ಕಾಗಿಯೇ ತಾನು ಕೊಲೆ ಮಾಡಿರುವುದಾಗಿ ಆರೋಪಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಪಾಲ್ಘರ್ ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!