- Advertisement -
- Advertisement -



ಲಕ್ನೋ : ಡಬಲ್ ಡೆಕ್ಕರ್ ಬಸ್ ಉರುಳಿ ಬಿದ್ದು ಐವರು ಮೃತಪಟ್ಟಿದ್ದು, 40ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಲಕ್ನೋದ ಪೂರ್ವಾಂಚಲ್ ಎಕ್ಸ್ ಪ್ರೆಸ್ ವೇಯಲ್ಲಿ ನಡೆದಿದೆ.
ಬಿರೇಂದ್ರ(30), ಅಂಜಲಿ(8), ಪ್ರಿಯಾಂಶು(15), ಆರು ವರ್ಷದ ಮಗು ಮತ್ತು 30 ವರ್ಷದ ಒಬ್ಬ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಬಸ್, ಪಂಜಾಬ್ ಲುಧಿಯಾನಾದಿಂದ ಬಿಹಾರದ ಮೊತಿಹಾರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಚಾಲಕ ಮತ್ತು ಕ್ಲೀನರ್ ಸ್ಥಳದಿಂದ ಪರಾರಿಯಾಗಿದ್ದು, ಪ್ರಯಾಣಿಕರು ಉರುಳಿದ ಬಸ್ ಒಳಗೆ ಸಿಲುಕಿಕೊಂಡಿದ್ದರು. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಪೊಲೀಸರು, ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಕ್ರೇನ್ ಸಹಾಯದಿಂದ ಬಸ್ ನ್ನು ಸಮೀಪದ ಟೋಲ್ ಪ್ಲಾಜಾಗೆ ಎಳೆಯಲಾಯಿತು. ಅಪಘಾತಕ್ಕೂ ಸುಮಾರು ಅರ್ಧ ಗಂಟೆ ಮೊದಲು ಚಾಲಕ ಡಾಬಾದಲ್ಲಿ ಮದ್ಯಪಾನ ಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ.
- Advertisement -








