Thursday, April 25, 2024
spot_imgspot_img
spot_imgspot_img

ರೈಲಿಗೆ ತಲೆಕೊಟ್ಟು ಮಗು ಜೊತೆ ತಾಯಿ ಆತ್ಮಹತ್ಯೆ!

- Advertisement -G L Acharya panikkar
- Advertisement -

ಲಖನೌ: ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಗಂಡ ಈದ್​ ಹಬ್ಬದ ಸಂಭ್ರಮಕ್ಕೆಂದು ಸಂಬಂಧಿಕರ ಮನೆಗೆ ತೆರಳಿದ್ದಾಗ ಹೆಂಡತಿ ತನ್ನ ಏಳು ವರ್ಷದ ಮಗನೊಂದಿಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ರಿಹಾನಾ (25) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈಕೆ ಶುಕ್ರವಾರ ಸಂಜೆ ಫತೇಗಂಜ್​ನಲ್ಲಿ ತನ್ನ ಮಗನೊಂದಿಗೆ ರೈಲಿಗೆ ಅಡ್ಡವಾಗಿ ನಿಂತು ಪ್ರಾಣ ಬಿಟ್ಟಿದ್ದಾಳೆ. ದೆಹಲಿಯಿಂದ ಬರುವ ಶ್ರಮಜೀವಿ ಎಕ್ಸ್​ಪ್ರೆಸ್​ ರೈಲಿಗೆ ಮಹಿಳೆ ಬಲಿಯಾಗಿರುವುದಾಗಿ ತಿಳಿಸಲಾಗಿದೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಸ್ಟೇಷನ್​ ಹೌಸ್ ಆಫೀಸರ್​ ವಿಜಯ್​ ರಾಣಾ ತಿಳಿಸಿದ್ದಾರೆ.

ರಿಹಾನಾ ಪತಿ ಸಿರ್ಜಾ ಶುಕ್ರವಾರದಂದು ಈದ್​ ಹಬ್ಬದ ಪ್ರಯುಕ್ತ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದನಂತೆ. ಆತ ವಾಪಸು ಬರುವಷ್ಟರಲ್ಲಿ ಹೆಂಡತಿ ಮಗ ಶವವಾಗಿದ್ದಾಗಿ ಆತ ತಿಳಿಸಿದ್ದಾನೆ. ಹೆಂಡತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅದೇ ಕಾರಣಕ್ಕೆ ಈ ದುರ್ಘಟನೆ ಆಗಿರಬಹುದು ಎಂದು ಆತ ಹೇಳಿದ್ದಾನೆ. 

- Advertisement -

Related news

error: Content is protected !!