Saturday, April 20, 2024
spot_imgspot_img
spot_imgspot_img

ಸೃಷ್ಟಿಕರ್ತನು ನೀಡಿದ ಪದವಿಗಳನ್ನು ಜನರಿಂದ ಅಳಿಸಲಾಗದು : ನಝೀರ್ ಅಮ್ಜದಿ ಸರಳಿಕಟ್ಟೆ

- Advertisement -G L Acharya panikkar
- Advertisement -

ವಿಟ್ಲ : ಅಸೂಯೆ ಅಹಂಕಾರದಿಂದ ಆಲಿಂಗಳ ಔಲಿಯಾಗಳ ಗೌರವ ಸ್ಥಾನಮಾನಗಳನ್ನು ಇಲ್ಲದಂತೆ ಮಾಡಲು ಅವರ ಬಗ್ಗೆ ಕೆಟ್ಟ ಕಥೆಗಳನ್ನು ಕಟ್ಟಿ ಪ್ರಚಾರ ಪಡಿಸುವುದು ಮೂರ್ಖತನವಾಗಿದೆ ಅಲ್ಲಾಹನು ನೀಡುವ ಉನ್ನತ ಪದವಿಗಳನ್ನು ಜನರಿಂದ ಇಲ್ಲವಾಗಿಸಲು ಖಂಡಿತಾ ಸಾಧ್ಯವಿಲ್ಲ ಅದಕ್ಕೊಂದು ಉದಾಹರಣೆಯಾಗಿದ್ದಾರೆ.

ಅದೆಷ್ಟೋ ಹೇಳಿ ತೀರದ ಪವಾಡಗಳ ಮೂಲಕ ಖ್ಯಾತರಾಗಿ ಇಂದಿಗೂ ಸ್ಮರಿಸಲ್ಪಡುತ್ತಿರುವ ಮಹಾನರಾದ ಮುಹಿಯ್ಯಿದ್ದೀನ್ ಶೈಖ್(ರ.ಅ)ಎಂದು ಮಾಣಿ ದಾರುಲ್ ಇರ್ಶಾದ್ ಖತೀಬ್ ಉಸ್ತಾದ್ ನಝೀರ್ ಅಮ್ಜದಿ ಸರಳಿಕಟ್ಟೆ ಹೇಳಿದರು.

ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಹಾಗೂ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ಸೋಮವಾರ ಹಂಝ ಕಾಯರಡ್ಕ ಅವರ ನಿವಾಸದಲ್ಲಿ ನಡೆದ ಮುಹ್ಯಿದ್ದೀನ್ ಮಾಲೆ ಆಲಾಪನೆ ಎಂಬ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ಅಶ್ರಫ್ ಸಖಾಫಿ ಸೂರಿಕುಮೇರು ಕಾರ್ಯಕ್ರಮವನ್ನು ಉದ್ಘಾಟಿಸಿ ದುಆ ಮಾಡಿದರು ಮುತ‌ಅಲ್ಲಿಂ‌ಗಳಾದ ಇಸಾಕ್ ಮಾಣಿ,ಮುಈನುದ್ದೀನ್ ಮಾಣಿ,ಜಮಾಲುದ್ದೀನ್ ಮಾಣಿ ಮುಹ್ಯಿದ್ದೀನ್ ಮಾಲೆ ಆಲಾಪನೆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಎಸ್‌ವೈಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ನಾಯಕರಾದ ಸ್ವಾದಿಖ್ ಪೇರಮೊಗರು, ಸುಲೈಮಾನ್ ಸೂರಿಕುಮೇರು, ಯೂಸುಫ್ ಹಾಜಿ,ಕೆಸಿಎಫ್ ಕಾರ್ಯಕರ್ತ ಆಸಿಫ್ ಸಂಕ ಸೂರಿಕುಮೇರು,ಇಬ್ರಾಹಿಂ ಸೂರಿಕುಮೇರು,ಮುಬಶ್ಶಿರ್ ಸೂರಿಕುಮೇರು,ಇಮ್ರಾನ್,ಕರೀಂ ನೆಲ್ಲಿ,ಇಬ್ರಾಹಿಂ ಮುಸ್ಲಿಯಾರ್ ಹಳೀರ,ಅಬ್ದುಲ್ ಫತ್ತಾಹ್ ಮಾಣಿ,ಅಬ್ಬಾಸ್ ಮಾಣಿ,ಮುನೀರ್ ಮಾಣಿ,ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು, ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು,ಮುಈನ್ ಮಾಣಿ ಧನ್ಯವಾದಗೈದರು.

- Advertisement -

Related news

error: Content is protected !!