Tuesday, November 3, 2026
spot_imgspot_img
spot_imgspot_img

ಮಡಿಕೇರಿ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ; ಗ್ರಾಮಸ್ಥರ ಆಕ್ರೋಶ

- Advertisement -
- Advertisement -

ಮಡಿಕೇರಿ: ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಶನಿವಾರ ಸಂಜೆ ನಡೆದಿದೆ.

ಮಡಿಕೇರಿ ತಾಲೂಕಿನ ಮದೆ ಗ್ರಾಮ ಪಂಚಾಯಿತಿಯ ಬೆಟ್ಟತ್ತೂರು ಗ್ರಾಮದ ನಿವಾಸಿ ಪೂಜಾ(17) ಮೃತರು. ಮಡಿಕೇರಿಯ ಸಂತ ಮೈಕೆಲ್ ಶಾಲೆಯ ಪ್ರಥಮ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತಿದ್ದ ಪೂಜಾ ನಿನ್ನೆ ಸಂಜೆ 5:30ಕ್ಕೆ ಕಾಲೇಜು ಮುಗಿಸಿ ಮನೆಗೆ ಹೋಗುವ ಸಂದರ್ಭದಲ್ಲಿ ಏಕಾಏಕಿ ಬಂದ ಕಾಡಾನೆ ದಾರಿಯಲ್ಲೇ ದಾಳಿ ನಡೆಸಿದ್ದರಿಂದ ಪೂಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಯುವತಿಯ ಶವವನ್ನ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ವಿದ್ಯಾರ್ಥಿನಿ ಪೂಜಾ ಹತ್ಯೆ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಆನೆ ದಾಳಿ ತಡೆಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ, ಮಾನ ಸಂಘರ್ಷ ತಡೆಗೆ ಕೂಡಲೇ ಅರಣ್ಯ ಇಲಾಖೆ ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!