Friday, March 29, 2024
spot_imgspot_img
spot_imgspot_img

ಮಧ್ಯಪ್ರದೇಶದಲ್ಲಿ ಲವ್ ಜಿಹಾದ್ ನಿಷೇಧ ಕಾನೂನಿಗೆ ಅನುಮೋದನೆ

- Advertisement -G L Acharya panikkar
- Advertisement -

ಮಧ್ಯಪ್ರದೇಶ: ಮಧ್ಯಪ್ರದೇಶ ಸಚಿವ ಸಂಪುಟ ಸಭೆ ಲವ್ ಜಿಹಾದ್’ಗೆ ನಿಷೇಧ ಹೇರುವ ಧಾರ್ಮಿಕ ಸ್ವಾತಂತ್ರ್ಯ ಮಸೂದೆ2020 ಕ್ಕೆ ಅನುಮೋದನೆ ನೀಡಿದೆ. ಮಸೂದೆಯ ಸೆಕ್ಷನ್ 3ರ ಪ್ರಕಾರ ಬಲವಂತವಾಗಿ ಧಾರ್ಮಿಕ ಮತಾಂತರಕ್ಕೆ ‌ಯತ್ನಿಸಿದರೆ 1-5ವರ್ಷಗಳ ಜೈಲು ಮತ್ತು 25 ಸಾವಿರ ದಂಡ ವಿಧಿಸಬಹುದಾಗಿದೆ. ಒಂದು ವೇಳೆ ಧರ್ಮವನ್ನು ಮುಚ್ಚಿಡುವ ಪ್ರಯತ್ನ ಮಾಡಿದರೆ 3-10 ವರ್ಷ ಕಾರಾಗೃಹ ಮತ್ತು ಕನಿಷ್ಠ 50ಸಾವಿರ ದಂಡ ಎಂದು ಆದೇಶ ಹೊರಡಿಸಿದೆ.

ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಪ್ರಾಪ್ತ ಅಥವಾ ಮಹಿಳೆಯನ್ನು ಬಲವಂತವಾಗಿ ಮತಾಂತರಕ್ಕೆ ಪ್ರಯತ್ನಿಸಿದರೆ, ರಕ್ತಸಂಬಂಧಿಗಳು ದೂರು ಸಲ್ಲಿಸಬಹುದು. ಅದರೊಂದಿಗೆ 2-10ವರ್ಷ ಜೈಲು ಸಜೆ ಹಾಗೂ 50ಸಾವಿರ ದಂಡ ಎಂದು ಮಸೂದೆ ಹೇಳಿದೆ.
ಇಬ್ಬರು ಅಥವಾ ಹೆಚ್ಚು ಮಂದಿ ಸೇರಿ ಸಾಮೂಹಿಕ ಧಾರ್ಮಿಕ ಮತಾಂತರಕ್ಕೆ ಯತ್ನಿಸಿದರೆ, 5-10ವರ್ಷ ಶಿಕ್ಷೆ, ಕನಿಷ್ಠ 1 ಲಕ್ಷ ದಂಡ ವಿಧಿಸಲು ಮಸೂದೆ ಅವಕಾಶ ನೀಡಿದೆ.


ಈ ಮೂಲಕ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸಭೆಯಲ್ಲಿ ಲವ್ ಜಿಹಾದ್ ಕಾನೂನು ಜಾರಿಗೊಂಡಿದೆ.

- Advertisement -

Related news

error: Content is protected !!