Saturday, May 4, 2024
spot_imgspot_img
spot_imgspot_img

ಮಹಾತ್ಮ ಗಾಂಧೀಜಿಯವರ ಕನ್ನಡಕ 2.60 ಕೋಟಿ ರೂ.ಗೆ ಹರಾಜು

- Advertisement -G L Acharya panikkar
- Advertisement -

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 2 ಕನ್ನಡಕಗಳು ಸುಮಾರು 2.60ಕೋಟಿ ರೂ.ಹರಾಜಾಗಿವೆ. ಚಿನ್ನ ಲೇಪಿತ ಈ ಕನ್ನಡವನ್ನು ಲಂಡನ್ ಈಸ್ಟ್ ಬ್ರಿಸ್ಟಲ್ ಆ್ಯಕ್ಷನ್ ಸಂಸ್ಥೆ ಹರಾಜಿಗಿಟ್ಟಿತ್ತು.

ಚಿನ್ನದ ಬಣ್ಣ ಹೊಂದಿದ್ದ ಕನ್ನಡಕವು ಸುಮಾರು 10-15 ಸಾವಿರ ರೂಪಾಯಿಗೆ ಮಾರಾಟವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅಚ್ಚರಿ ಎಂಬಂತೆ ಆ ಕನ್ನಡಕವನ್ನು ವ್ಯಕ್ತಿಯೊಬ್ಬರು ಬರೋಬ್ಬರಿ 2 ಕೋಟಿ 60 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ. ಮಹಾತ್ಮ ಗಾಂಧೀಜಿ 1920ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಈಗಿನ ಈ ಕನ್ನಡಕದ ಮಾಲೀಕರ ಚಿಕ್ಕಪ್ಪನಿಗೆ ಗಾಂಧೀಜಿಯವರು ತಮ್ಮ ಕನ್ನಡಕವನ್ನು ಉಡುಗೊರೆಯಾಗಿ ನೀಡಿದ್ದರು ಎಂದು ತಿಳಿದು ಬಂದಿದೆ.

ಈಸ್ಟ್ ಬ್ರಿಸ್ಟಲ್ ಹರಾಜಿನಲ್ಲಿ ಮಾತನಾಡಿದ ಮಾರಾಟಗಾರ ಆ್ಯಂಡ್ರ್ಯೂ ಸ್ಟೋವ್, ನಂಬಲಾಗದ ವಸ್ತುಗಳಿಗೆ ನಂಬಲಾಗದ ಫಲಿತಾಂಶ. ಬಿಡ್ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!