Saturday, June 13, 2026
spot_imgspot_img
spot_imgspot_img

ಪುತ್ತೂರು : ಮಾಯ್ ದೆ ದೇವುಸ್ ಚರ್ಚ್ – ಪುತ್ತೂರು ವಾರ್ಷಿಕ ಹಬ್ಬ (ಸಾಂತ್ ಮಾರಿ)

- Advertisement -
- Advertisement -

ಪುತ್ತೂರು : ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ವಾರ್ಷಿಕ ಹಬ್ಬವನ್ನು ಜನವರಿ 17 ರಂದು ಬೆಳಿಗ್ಗೆ 10 ಗಂಟೆಯ ಸಂಭ್ರಮದ ಬಲಿಪೂಜೆಯೊಂದಿಗೆ ಆಚರಿಸಲಾಯಿತು. ಈ ಹಬ್ಬದ ಪ್ರಧಾನ ಧರ್ಮಗುರುನ ಧರ್ಮಗುರುಗಳಾಗಿ ವಂದನೀಯ ಜೋಸೆಫ್ ಮಾರ್ಟಿಸ್‍ರವರು ಬಲಿಪೂಜೆಯನ್ನು ಆರ್ಪಿಸಿದರು

ತಮ್ಮ ಪ್ರವಚನದಲ್ಲಿ ಇಂದಿನ ದಿನಗಳಲ್ಲಿ ಒಬ್ಬರಿಗೊಬ್ಬರು ಮಾತನಾಡುವುದು ಕಡಿಮೆ ಆಗಿದೆ ಅದೇ ಮೊಬೈಲ್ ನಲ್ಲಿ ಮಾತನಾಡುವುದು ಜಾಸ್ತಿ ಆಗಿದೆ, ನಾವು ಮನೆಯಲ್ಲಿ ನಮ್ಮ ಹಿರಿಯರೊಡನೆ , ಮಕ್ಕಳೊಡನೆ ತುಂಬಾ ಮಾತನಾಡ್ಬೇಕು ಇದರಿಂದ ನಮ್ಮ ಸಂಬಂಧ ದೀರ್ಘ ಕಾಲದವರೆಗೆ ಉಳಿಯುತ್ತದೆ ಎಂದು ಹಿತ ವಚನ ನುಡಿದರು

ಬಲಿಪೂಜೆಯಲ್ಲಿ ಮಾಯ್ ದೆ ದೇವುಸ್ ಚರ್ಚ್ ಪುತ್ತೂರು ಇದರ ಪ್ರಧಾನ ಧರ್ಮಗುರುಳಾದ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರುಗಳಾದ ವಂದನೀಯ ಲೋಹಿತ್ ಅಜಯ್ ಮಸ್ಕರೇನ್ಹಸ್, ವಂದನೀಯ ಸ್ಟ್ಯಾನಿ ಪಿಂಟೋ, ವಂದನೀಯ ಅಶೋಕ್ ರಾಯನ್ ಕ್ರಾಸ್ತಾ, ವಂದನೀಯ ರೂಪೇಶ್ ತೌರೋ, ವಂದನೀಯ ಮಾಕ್ಸಿಮ್ ಡಿಸೋಜ ಇನ್ನಿತರ 25 ಕ್ಕೂ ಹೆಚ್ಚು ಧರ್ಮಗುರುಗಳು, ಧರ್ಮಭಗಿನೀಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಚರ್ಚ್ ವಠಾರದಲ್ಲಿ ಜಾತ್ರಾ ಸಂತೆಯಲ್ಲಿ ವಿವಿದ ಅಂಗಡಿ ಮುಂಗಟ್ಟುಗಳು, ICYM, YCS ವತಿಯಿಂದ ಆಟೋಟ ಸ್ಪರ್ಧೆಗಳು ನಡೆದವು.

- Advertisement -

Related news

error: Content is protected !!