Sunday, June 21, 2026
spot_imgspot_img
spot_imgspot_img

250Kg ತೂಕದ ಮೀನು ಸೆರೆ ; ಎರಡು ಕೊಂಬಿನ ತೊರಕೆ ನೋಡಲು ಮುಗಿಬಿದ್ದ ಜನ

- Advertisement -
- Advertisement -

ಮಂಗಳೂರು ಅ.(21): ಮಂಗಳವಾರ ರಾತ್ರಿ ಮೀನುಗಾರಿಕೆಗೆ ಬಂದರಿನಿಂದ ಹೊರಟ ಬೋಟ್ ನ ಬಲೆಗೆ ಎರಡು ಬೃಹತ್ ಗಾತ್ರದ ತೊರಕೆ ಮೀನು ಬಿದ್ದಿದೆ. ಮಲ್ಪೆಯ ನಾಗಸಿದ್ಧಿ ಬೋಟಿನ ಮಾಲಕರಾದ ಸುಭಾಸ್ ಅವರ ಬೋಟ್ ಗೆ ಸಿಕ್ಕಿದ ಎರಡು ತೊರಕೆ ಮೀನುಗಳನ್ನು ಕ್ರೇನ್ ನ ಸಹಾಯದಿಂದ ಬೋಟ್ ನಿಂದ ಕೆಳಕ್ಕೆ ಇಳಿಸಲಾಯಿತು.

ಸುಮಾರು 700 ಕೆಜಿ ಮತ್ತು 250 ಕೆಜಿ ತೂಕವಿದ್ದ ಮೀನನ್ನು ಬುಧವಾರ ಮಲ್ಪೆ ಬಂದರಿನಲ್ಲಿ ಇಳಿಸಲಾಯಿತು. ಲಾಕ್ ಡೌನ್ ನಿಂದ ಮೀನುಗಾರರ ಬದುಕು ಸಂಕಷ್ಟಕರವಾಗಿತ್ತು .ಈ ಹಿಂದೆಯೂ ಇದಕ್ಕಿಂತಲೂ ದೊಡ್ಡ ಮೀನುಗಳು ಬಲೆಗೆ ಬಿದ್ದಿವೆ. ಆದರೆ ಲಾಕ್ ಡೌನ್ ನಂತರ ಬೋಟ್ ಗೆ ಸಿಕ್ಕ ದೊಡ್ಡ ಮೀನು ಇದಾಗಿದ್ದು ಸದ್ಯ ಬಂದರಿಗೆ ತಂದಿದ್ದ ಮೀನು ಉತ್ತಮ ಬೆಲೆಗೆ ಮಾರಾಟವಾಗಿದೆ.

- Advertisement -

Related news

error: Content is protected !!