Friday, June 5, 2026
spot_imgspot_img
spot_imgspot_img

ಮಲ್ಪೆ: ಡ್ರಗ್ಸ್‌ ಪಾರ್ಸೆಲ್‌ ಹೆಸರಲ್ಲಿ ಬೆದರಿಸಿ ಅಪರಿಚಿತ ವ್ಯಕ್ತಿಯಿಂದ 20 ಲ.ರೂ. ವಂಚನೆ..!

- Advertisement -
- Advertisement -

ಮಲ್ಪೆ: ಪಾರ್ಸೆಲ್‌ನಲ್ಲಿ ಡ್ರಗ್ಸ್‌ ಇದೆ ಎಂದು ಬೆದರಿಸಿ ಮಲ್ಪೆಯ ವ್ಯಕ್ತಿಯೋರ್ವರಿಗೆ ಅಪರಿಚಿತನೋರ್ವ 20 ಲಕ್ಷ ರೂ. ವಂಚಿಸಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, ತನ್ನನ್ನು ಫೆಡೆಕ್ಸ್‌ ಕೊರಿಯರ್‌ ಕಂಪೆನಿಯ ಆಕಾಶ್‌ ವರ್ಮ ಎಂದು ಪರಿಚಯ ಮಾಡಿಕೊಂಡಿದ್ದಾನೆ. ನೀವು ಕಳಿಸಿರುವ ಪಾರ್ಸೆಲ್‌ನಲ್ಲಿ 2 ಕೆಜಿ ಬಟ್ಟೆ, 4 ಎಕ್ಸ್‌ಪಯರ್ಡ್ ಪಾಸ್‌ಪೋರ್ಟ್‌, 4 ಡೆಬಿಟ್‌ ಕಾರ್ಡ್‌, 1 ಲ್ಯಾಪ್‌ಟಾಪ್‌, 420 ಗ್ರಾಂ ಎಂಡಿಎಂಎ ಡ್ರಗ್ಸ್‌ ಇದ್ದು, ಪಾರ್ಸೆಲ್‌ ಮುಂಬಯಿಯ ಎನ್‌ಸಿಬಿ ವಶದಲ್ಲಿದೆ. ನೀವು ಅರ್ಮನ್‌ ಅಲಿ ಅವರಿಗೆ ಪಾರ್ಸೆಲ್‌ ಕಳುಹಿಸಿರುವುದಾಗಿ ತಿಳಿಸಿದ ಆತ ಪೊಲೀಸ್‌ ಕ್ಲಿಯರೆನ್ಸ್‌ ಪಡೆಯಲು ಸ್ಕೈಪ್‌ ವೀಡಿಯೋಕಾಲ್‌ಗೆ ಬರುವಂತೆ ಹೇಳಿದ್ದಾನೆ. ಬಳಿಕ ಸ್ಕೈಪ್‌ನಲ್ಲಿ ಆಧಾರ್‌ ಕಾರ್ಡ್‌ ಮತ್ತು ಬ್ಯಾಂಕ್‌ ಸ್ಟೇಟ್‌ಮೆಂಟ್‌ ಸಾಫ್ಟ್‌ ಕಾಪಿಯನ್ನು ಪಡೆದುಕೊಂಡು, ಎಲ್ಲ ದಾಖಲೆಗಳನ್ನು ಪರಿಶೀಲಿಸುವುದಾಗಿ ತಿಳಿಸಿ ವ್ಯಕ್ತಿಗೆ ಐಸಿಐಸಿಐ ಬ್ಯಾಂಕ್‌ ಖಾತೆಯ ಐ ಮೊಬೈಲ್‌ ಅಪ್ಲಿಕೇಶನ್‌ ಲಾಗಿನ್‌ ಆಗಲು ಸೂಚನೆ ನೀಡಿದ್ದಾನೆ.

ಪರ್ಸನಲ್‌ ಲೋನ್‌ ಸೆಕ್ಷನ್‌ನಲ್ಲಿ 20 ಲಕ್ಷ ರೂ. ವಂಚನೆಯ ಹಣ ಇದ್ದು, ಅದನ್ನು ದೂರುದಾರರ ಖಾತೆಗೆ ಜಮೆ ಮಾಡಿಕೊಳ್ಳುವಂತೆ ಸೂಚಿಸಿರುತ್ತಾನೆ. ಅದರಂತೆ ದೂರುದಾರರು 20 ಲಕ್ಷ ರೂ. ವರ್ಗಾಯಿಸಿದ್ದು, ಬಳಿಕ ಇದು ವಂಚನೆ ಎಂಬುದು ಅರಿವಿಗೆ ಬಂದಿದೆ ಎಂದು ಮಲ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

- Advertisement -

Related news

error: Content is protected !!