Sunday, June 7, 2026
spot_imgspot_img
spot_imgspot_img

ಆಸ್ಪತ್ರೆಗೆ ಹೋದ ವ್ಯಕ್ತಿ ವಾಪಸ್ಸು ಮನೆಗೆ ಹೋಗದೆ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ: ಬೆಂಗಳೂರು ದಕ್ಷಿಣದ ಶಾಕಾಂಬರಿ ನಗರ ಕನಕಪುರ ಮುಖ್ಯರಸ್ತೆ ಜೆಪಿ ನಗರ 1 ನೇ ಹಂತದ ನಂಜುಡಪ್ಪ ಬಡಾವಣೆ ಬಿಲ್ಡಿಂಗ್ ರೂ ನಂ 71 2 ರಲ್ಲಿ ವಾಸವಿದ್ದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ನವೀನ ಶೆಟ್ಟಿ @ ಪ್ರವೀಣ್ ಕುಮಾರ್ ಹೆಗ್ಡೆ ಎಂದು ಗುರುತಿಸಲಾಗಿದೆ.

ನವೀನ ಶೆಟ್ಟಿರವರು 10-10-2025 ರಂದು 7:30 ಗಂಟೆಗೆ ಡಯಾಲಿಸಿಸ್‌ ಮಾಡಿಸಲು ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋಗಿದ್ದು, ಪತ್ನಿ ಅಂಬಿಕಾ ಶೆಟ್ಟಿ ಎಂಬವರು ಸಮಯ ಸುಮಾರು 17:50 ಗಂಟೆಗೆ ನವೀನ ಶೆಟ್ಟಿರವರ ಭಾವ ಕರೆ ಮಾಡಿ ವಿಚಾರಿಸಿದ್ದು ಡಯಾಲಿಸಿಸ್‌ ಮಾಡಿಸಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದು, ನಂತರ ನವೀನ್ ಶೆಟ್ಟಿರವರ ಮೊಬೈಲ್ ಗೆ ಕರೆ ಮಾಡಿದಾಗ ಸ್ವೀಕರಿಸದೇ ಇದ್ದು, ಆತನ ಸ್ನೇಹಿತರು ಮತ್ತು ಆಸ್ಪತ್ರೆಗೆ ಕರೆ ಮಾಡಿ ವಿಚಾರಿಸಿದ್ದು ಎಲ್ಲಿಯೂ ಕಂಡುಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ:
115/2025 ಕಲಂ: ಗಂಡಸು ಕಾಣೆ ಎನ್ನುವ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ನವೀನ ಶೆಟ್ಟಿ @ ಪ್ರವೀಣ್ ಕುಮಾರ್ ಹೆಗ್ಡೆ ಅವರಿಗೆ 47 ವರ್ಷ ವಯಸ್ಸಾಗಿತ್ತು. ಈ ಮೇಲಿನ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ. ದೂರವಾಣಿ ಸಂಖ್ಯೆ 08256232093 ಪೊಲೀಸ್ ನಿರೀಕ್ಷಕರು ಬೆಳ್ತಂಗಡಿ 9480805370

- Advertisement -

Related news

error: Content is protected !!