Friday, April 26, 2024
spot_imgspot_img
spot_imgspot_img

ದಿವಂಗತ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಕನಸು ಇಂದು ನನಸು-ನರೇಂದ್ರ ಮೋದಿ

- Advertisement -G L Acharya panikkar
- Advertisement -

ಮನಾಲಿ: ಹಿಮಾಲಚ ಪ್ರದೇಶದ ರೋಹ್ಟಾಂಗ್​ನಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿ ಉದ್ದವಾದ ಮತ್ತು ಕುದುರೆ ಲಾಳದ ಆಕಾರದ ಅಟಲ್​ ಸುರಂಗ ಮಾರ್ಗವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು.

ಅಟಲ್​ ಜೀ ಸರ್ಕಾರದ ನಂತರ ಈ ಕೆಲಸವನ್ನು ಮರೆತು ಬಿಡಲಾಗಿತ್ತು. 2013-14 ಕೇವಲ 1300 ಮೀಟರ್ ಸುರಂಗದ ಕೆಲಸ ಮಾತ್ರ ಪೂರ್ಣಗೊಂಡಿತ್ತು. ಆದರೆ, ಇಂದು ಅಟಲ್​ ಜೀ ಕೆಲಸ ಪೂರ್ಣಗೊಂಡಿದೆ ಎಂದರು.ಅವರ ಕನಸು ನನಸಾಗಿದೆ ಎಂದರು.

ಅಟಲ್​ ಸುರಂಗವು ಭಾರತದ ಗಡಿ ಮೂಲಸೌಕರ್ಯಕ್ಕೆ ಹೊಸ ಬಲವನ್ನು ತುಂಬಲಿದೆ. ಇದು ವಿಶ್ವದರ್ಜೆಯ ಗಡಿ ಸಂಪರ್ಕದ ಉದಾಹರಣೆಯಾಗಿದೆ. ಸುರಂಗ ಸಂಪರ್ಕವು ಅಭಿವೃದ್ಧಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಗಡಿ ಪ್ರದೇಶಗಳಲ್ಲಿನ ಸಂಪರ್ಕವು ಸುರಕ್ಷತಾ ವಿಷಯಗಳಿಗೆ ನೇರವಾಗಿ ಸಂಬಂಧಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

- Advertisement -

Related news

error: Content is protected !!