Saturday, April 20, 2024
spot_imgspot_img
spot_imgspot_img

ಮಂಗಳೂರು: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು!

- Advertisement -G L Acharya panikkar
- Advertisement -
driving

ಮಂಗಳೂರು: ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹಾಸ್ಟೇಲ್ ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತರನ್ನು ನೀನಾ (19) ಎನ್ನಲಾಗಿದೆ.

ನೀನಾ ಮೂಲತಃ ಕಾಸರಗೋಡಿನ ನಿವಾಸಿಯಾಗಿದ್ದು, ಹಾಸ್ಟೇಲ್ ನಲ್ಲಿ ವಾಸವಾಗಿದ್ದರು. ನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರ ಸಂಜೆ ಹಾಸ್ಟೆಲ್ ಕೊಠಡಿಯ ಬಾತ್ ರೂಮಿನಲ್ಲಿ ಈಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಹಾಸ್ಟೆಲ್ ನಲ್ಲಿ ನೀಡುತ್ತಿದ್ದ ಮಾನಸಿಕ ಕಿರುಕುಳವೇ ಕಾರಣ ಎಂದು ಇತರ ವಿದ್ಯಾರ್ಥಿಗಳು ದೂರಿದ್ದಾರೆ.

ಮನೆಯವರ ಜೊತೆ ಮಾತನಾಡುವುದಕ್ಕೆ ಮೊಬೈಲ್ ಬಳಕೆ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕಾಲೇಜು ಆಡಳಿತಕ್ಕೆ ಕೇರಳದಿಂದ ವಿದ್ಯಾರ್ಥಿಗಳನ್ನು ಪೂರೈಸುವ ಏಜಂಟ್ ಒಬ್ಬ ಹಾಸ್ಟೆಲ್ ನಡೆಸುತ್ತಿದ್ದ ಎನ್ನಲಾಗುತ್ತಿದೆ. ಆತ ಕೂಡ ಕೇರಳ ಮೂಲದ ವ್ಯಕ್ತಿಯೇ ಆಗಿದ್ದು, ವಿದ್ಯಾರ್ಥಿಗಳಿಗೆ ನಿರ್ಬಂಧ ನೆಪದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿದ್ದಾರೆ. ವಿದ್ಯಾರ್ಥಿನಿ ನೀನಾ ಡೈರಿ ಬರೆಯುವ ಅಭ್ಯಾಸ ಹೊಂದಿದ್ದು ಈ ಬಗ್ಗೆ ಡೈರಿಯಲ್ಲಿ ಬರೆದುಕೊಂಡಿದ್ದಾಳೆ ಎನ್ನಲಾಗಿದೆ.

- Advertisement -

Related news

error: Content is protected !!