Sunday, May 12, 2024
spot_imgspot_img
spot_imgspot_img

ಮಂಗಳೂರು: ವಿರೋಧಕ್ಕೂ, ವಿವಾದಕ್ಕೂ ಸೊಪ್ಪು ಹಾಕದ ವಿವಿ; ಡೋಂಟ್ ಕೇರ್ ಅನ್ನದೇ ಶ್ರೀಕಾಂತ್ ಶೆಟ್ಟಿ ಭಾಷಣ

- Advertisement -G L Acharya panikkar
- Advertisement -
vtv vitla

ಮಂಗಳೂರು: ವಿವಿ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಸಂಘದಿಂದ ಶ್ರೀಕಾಂತ್‌ ಶೆಟ್ಟಿಗೆ ಆಹ್ವಾನ ನೀಡಲಾಗಿತ್ತು. ಹಿಂದು ಮುಖಂಡನಿಗೆ ಆತಿಥ್ಯ ನೀಡಿದ್ದ ಬಗ್ಗೆ ಎನ್ಎಸ್ ಯುಐ ಕಡೆಯಿಂದ ಭಾರೀ ವಿರೋಧ ಕೇಳಿಬಂದಿತ್ತು. ಆದರೀಗ ವಿರೋಧದ ನಡುವೆಯೂ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಹಿಂಜಾವೇ ಮುಖಂಡ ಶ್ರೀಕಾಂತ್‌ ಶೆಟ್ಟಿ ಸದ್ದಿಲ್ಲದೆ ಬಂದು ಹೋಗಿದ್ದಾರೆ.

ಮಂಗಳೂರಿನ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ಜೂ.23ರಂದು ಪ್ರತಿಭಾ ದಿನಾಚರಣೆ ಹಾಗೂ ಜೂ.24ರಂದು ಕಾಲೇಜು ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಪ್ರತಿಭಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಗೆ ಹಿಂದು ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಅವರನ್ನು ಆಹ್ವಾನಿಸಿದ್ದಕ್ಕೆ ಎನ್‌ಎಸ್‌ಯುಐ ವಿರೋಧ ವ್ಯಕ್ತಪಡಿಸಿತ್ತು. ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಲ್ಲದೆ, ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿತ್ತು. ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು ವಿವಿ ಕಾಲೇಜು ಆಡಳಿತವು ಎರಡೂ ಕಾರ್ಯಕ್ರಮಗಳನ್ನು ಮುಂದೂಡಿಕೆ ಮಾಡಿತ್ತು. ಕಾಲೇಜಿನ ಎಬಿವಿಪಿ ನೇತೃತ್ವದ ವಿದ್ಯಾರ್ಥಿ ಸಂಘದಿಂದ ಶ್ರೀಕಾಂತ್‌ ಶೆಟ್ಟಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಎನ್ಎಸ್ ಯುಐ ವಿದ್ಯಾರ್ಥಿಗಳು ಶ್ರೀಕಾಂತ್ ಶೆಟ್ಟಿಯನ್ನು ಕರೆಸಿದರೆ, ಕಾಲೇಜಿನಲ್ಲಿ ಕೋಮು ಭಾವನೆ ಕೆರಳಲು ಕಾರಣವಾಗುತ್ತೆ ಎಂದು ಆರೋಪಿಸಿತ್ತು.

ಮುಂದೂಡಿದ್ದ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಮಂಗಳವಾರ ನಡೆಸಲಾಗಿದೆ. ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಭಾಗಿಯಾಗಿ ಭಾಷಣ ಮಾಡಿದ್ದಾರೆ. ಶಾಂತಿಯುತವಾಗಿ ಕಾರ್ಯಕ್ರಮ ಮುಕ್ತಾಯವಾಗಿದ್ದು ವಿರೋಧ ವ್ಯಕ್ತಪಡಿಸಿದ್ದವರಿಗೆ ಶ್ರೀಕಾಂತ್ ಶೆಟ್ಟಿ ಬಂದು ಭಾಷಣ ಮಾಡಿ ಹೋಗಿದ್ದೇ ಗೊತ್ತಿಲ್ಲ. ಕೋಮು ಪ್ರಚೋದನೆ ಭಾಷಣ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದರು. ಕಾರ್ಯಕ್ರಮಕ್ಕೆ ಪೊಲೀಸರು ಭದ್ರತೆಯನ್ನೂ ನೀಡಿದ್ದರು.

- Advertisement -

Related news

error: Content is protected !!