Thursday, June 24, 2021
spot_imgspot_img
spot_imgspot_img

ಮಂಗಳೂರು: ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಿಸುವಂತೆ ಮನವಿ; ಡಾ.ವೈ ಭರತ್ ಶೆಟ್ಟಿ

- Advertisement -
- Advertisement -

ಮಂಗಳೂರು: ನಗರ ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ತಾತ್ಕಾಲಿಕ ಮಾರುಕಟ್ಟೆಯಲ್ಲಿ ನಾಗರಿಕರ ಸುರಕ್ಷತೆಗೆ ತಾವು ಬುಧವಾರ ಸೂಚಿಸಿರುವ ಕ್ರಮಗಳು ಸಮರ್ಪಕವಾಗಿ ಅನುಷ್ಟಾನಕ್ಕೆ ಬಂದಿರುವುದನ್ನು ಪರಿಶೀಲಿಸಲು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಗುರುವಾರ ಮರುಭೇಟಿ ನೀಡಿದರು.

ಮಾರುಕಟ್ಟೆ ಪ್ರವೇಶಿಸಲು ಎರಡು ದ್ವಾರಗಳನ್ನು ವ್ಯವಸ್ಥೆ ಮಾಡಿದ್ದು, ದ್ವಾರಗಳಲ್ಲಿ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿಗಳು ಇರುತ್ತಾರೆ. ಅದೇ ರೀತಿ ಒಂದು ನಿರ್ಗಮನ ದ್ವಾರ ಇದೆ. ಸಾಮಾಜಿಕ ಅಂತರ ಕಾಪಾಡಿ ವ್ಯವಹಾರ ಮಾಡುವ ಮೂಲಕ ವ್ಯಾಪಾರಿಗಳು ಹಾಗೂ ಗ್ರಾಹಕರು ಮುಂಜಾಗ್ರತೆ ವಹಿಸಬೇಕು ಎಂದು ಶಾಸಕರು ಹೇಳಿದ್ದು, ಈಗಾಗಲೇ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಿಸುವಂತೆ ಮನವಿಗಳು ಬಂದ ಹಿನ್ನಲೆಯಲ್ಲಿ ಇದನ್ನು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಡಿಸಿ ಗಮನಕ್ಕೆ ತರಲಾಗಿದೆ ಎಂದರು. ಶಾಸಕರೊಂದಿಗೆ ಮನಪಾ ಸದಸ್ಯ ವರುಣ್ ಚೌಟ ಉಪಸ್ಥಿತರಿದ್ದರು.

- Advertisement -
- Advertisement -

MOST POPULAR

HOT NEWS

Related news

error: Content is protected !!