Friday, May 17, 2024
spot_imgspot_img
spot_imgspot_img

ಮಂಗಳೂರು: 2 ಟಗ್ ಬೋಟ್ ನಾಪತ್ತೆ- ಓರ್ವ ಸಾವು, 14 ಮಂದಿಗಾಗಿ ಶೋಧ!

- Advertisement -G L Acharya panikkar
- Advertisement -

ಮಂಗಳೂರು: ಎಂಆರ್ಪಿಎಲ್(MRPL)ಗೆ ಸೇರಿದ 17 ಮಂದಿ ಇದ್ದ ಎರಡು ಟಗ್ ಬೋಟ್’ಗಳು ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಎರಡು ಟಗ್ ಬೋಟ್’ಗಳ ಪೈಕಿ ಒಂದರಲ್ಲಿ ಎಂಟು ಹಾಗೂ ಇನ್ನೊಂದರಲ್ಲಿ ಒಂಬತ್ತು ಮಂದಿ ಇದ್ದರು. ಆ ಪೈಕಿ 8 ಮಂದಿ ಇದ್ದ ಟಗ್ ಬೋಟ್ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿದ್ದ ಎಂಟು ಜನರ ಪೈಕಿ ಇಬ್ಬರು ಈಜಿ ದಡ ಸೇರಿದ್ದು, ಒಬ್ಬರ ಶವ ಪತ್ತೆಯಾಗಿದೆ. ಉಳಿದ ಐವರು ಇನ್ನೂ ಪತ್ತೆಯಾಗಿಲ್ಲ.

9 ಮಂದಿ ಇದ್ದ ಇನ್ನೊಂದು ಟಗ್ ಬೋಟ್ ಕುರಿತು ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಬೋಟ್ ನಲ್ಲಿದ್ದ 9 ಮಂದಿ, ಇನ್ನೊಂದರಲ್ಲಿದ್ದ 8 ಜನರ ಪೈಕಿ ನಾಪತ್ತೆ ಆಗಿರುವ ಐವರು ಸೇರಿ ಒಟ್ಟು 14 ಮಂದಿ ಗಾಗಿ ಶೋಧ ಮುಂದುವರಿದಿದೆ.

driving
- Advertisement -

Related news

error: Content is protected !!