Thursday, June 4, 2026
spot_imgspot_img
spot_imgspot_img

ಮಂಗಳೂರು: ಜೆಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಬಸ್ಸು ಬೆಂಕಿಗಾಹುತಿ!

- Advertisement -
- Advertisement -

ಮಂಗಳೂರು: ಲಾಕ್‌ಡೌನ್ ಹಿನ್ನಲೆಯಲ್ಲಿ ಜೆಪ್ಪು ಮಾಕೆರ್ಟ್ನಲ್ಲಿ ನಿಂತಿದ್ದ ಬಸ್ಸುವೊಂದು ಬೆಂಕಿಗಾಹುತಿಯಾದ ಘಟನೆ ಇಂದು ಬೆಳಿಗ್ಗಿನ ಜಾವ ಸಂಭವಿಸಿದೆ.

ಮುಂಜಾನೆ 4ರ ಹೊತ್ತಿಗೆ ನರೇಶ್ ಪೂಜಾರಿ ಮಾಲಕತ್ವದ ರಾಜಲಕ್ಷ್ಮಿ ಟ್ರಾವೆಲ್ಸ್ 15 ಬಸ್ಸಿನಲ್ಲಿ ಬೆಂಕಿಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಹತ್ತಿರದಲ್ಲೇ ಇದ್ದ ಬಸ್ಸುಗಳಿಗೆ ಯಾವುದೇ ಹಾನಿ ಉಂಟಾಗಿಲ್ಲ. ಇದು ದುಷ್ಕರ್ಮಿಗಳ ಕೃತ್ಯ ಎಂದು ಹೇಳಲಾಗುತ್ತಿದ್ದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!