Wednesday, June 17, 2026
spot_imgspot_img
spot_imgspot_img

ಮಂಗಳೂರು: ಕಮಿಷನರ್ ಶಶಿಕುಮಾರ್ ಹೆಸರಿನಲ್ಲಿ ನಕಲಿ ‘ಫೇಸ್ ಬುಕ್’ ಖಾತೆ- ಸಾರ್ವಜನಿಕರು ಎಚ್ಚರದಿಂದಿರಲು ಕಮಿಷನರ್ ಮನವಿ

- Advertisement -
- Advertisement -

ಮಂಗಳೂರು: ನಗರ ಕಮಿಷನರ್ ಶಶಿಕುಮಾರ್ ರವರ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆ ತೆರೆದಿದ್ದಾರೆ. ದುಷ್ಕರ್ಮಿಗಳು ಈ ರೀತಿಯ ಕೃತ್ಯದಲ್ಲಿ ಕೈ ಜೋಡಿಸಿದ್ದು, ಕಮಿಷನರ್ ಹೆಸರಿನಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಖಾತೆ ತೆರೆದು ವಂಚಿಸಲು ಮುಂದಾಗಿದ್ದಾರೆ.

ನಕಲಿ ಖಾತೆಯ ಬಗ್ಗೆ ಮಾಹಿತಿ ತಿಳಿದಾಕ್ಷಣ ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿದೆ. ಸಾರ್ವಜನಿಕರು ಎಚ್ಚರದಿಂದಿರಬೇಕೆಂದು ಮನವಿ ಮಾಡಿದ್ದಾರೆ. ತಮ್ಮ ಅಸಲಿ ಫೇಸ್ ಬುಕ್ ಖಾತೆಯ ಮೂಲಕವೇ ಕಮಿಷನರ್ ಮನವಿ ಮಾಡಿಕೊಂಡಿದ್ದಾರೆ.

ದುಷ್ಕರ್ಮಿಗಳು ಅಸಲಿ ಅಕೌಂಟನ್ನು ಯತಾವತ್ತಾಗಿ ಒಂದೇ ಫೊಟೋ, ವಿವರಗಳನ್ನು ಬಳಸಿ ನಕಲಿ ಮಾಡಿದ್ದಾರೆ. ನಕಲಿ ಖಾತೆಯ ಬಗ್ಗೆ ಎಲ್ಲರೂ ಜಾಗರೂಕರಾಗಿರಬೇಕು. ಹಣ ವರ್ಗಾಯಿಸಲು ವಿನಂತಿಸಲು ಆರಂಭಿಸಬಹುದು. ಅಂತಹ ವಿನಂತಿಗಳ ಬಗ್ಗೆ ಎಲ್ಲರೂ ಜಾಗರೂಕರಾಗಿರಿ ಎಂಬುವುದಾಗಿ ಮಂಗಳೂರು ಕಮಿಷನರ್ ಎನ್. ಶಶಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!