Wednesday, April 24, 2024
spot_imgspot_img
spot_imgspot_img

ರಾಷ್ಟ್ರ ವಿರೋಧಿ ಕೃತ್ಯಗಳನ್ನು ಸಹಿಸಲಾಗದು – ಶಾಸಕ ಕಾಮತ್

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರಿನ ಬಿಜೈ ಪರಿಸರದಲ್ಲಿ ಕಟ್ಟಡದ ಕಾಂಪೌಂಡ್ ನಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಪರ ಬರಹಗಳು ಕಂಡು ಬಂದಿರುವ ವಿಚಾರಕ್ಕೆ ಸಂಬಂಧಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಅಧಿಕಾರಿಗಳ‌ಜೊತೆ ಚರ್ಚಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಕಾಮತ್, ಮಂಗಳೂರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಪರವಾಗಿ ಕಂಡು ಬಂದಿರುವ ಗೋಡೆ ಬರಹವು ಆತಂಕಕಾರಿಯಾಗಿದೆ. ಇಂತಹ ರಾಷ್ಟ್ರ ವಿರೋಧಿ ಕೃತ್ಯಗಳನ್ನು ಸಹಿಸಲಾಗದು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.

ಈ ವಿಚಾರವಾಗಿ ಈಗಾಗಲೇ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಜರಗಿಸಲು ಸೂಚನೆ ನೀಡಿದ್ದೇನೆ. ಇಂತಹ ಮನಸ್ಥಿತಿಯನ್ನು ಮೊಳಕೆಯಲ್ಲೇ ಚಿವುಟದಿದ್ದರೆ ಭಯೋತ್ಪಾದನಾ ಚಟುವಟಿಕೆಯ ಬೇರು ಮತ್ತಷ್ಟು ಆಳಕ್ಕೆ ಹೋಗಬಹುದು ಎಂದರು.

- Advertisement -

Related news

error: Content is protected !!