Thursday, June 18, 2026
spot_imgspot_img
spot_imgspot_img

ಮಂಗಳೂರು: ಸಮಾರಾಧನೆ ವೇಳೆ ಮೃತ ವ್ಯಕ್ತಿ ಪ್ರತ್ಯಕ್ಷ – ಕುಟುಂಬದವರಿಗೆ ಶಾಕ್!

- Advertisement -
- Advertisement -

ಮಂಗಳೂರು: ಮೃತಪಟ್ಟ ವ್ಯಕ್ತಿಯ ಸಮಾರಾಧನೆ ವೇಳೆಯಲ್ಲಿ ಅದೇ ವ್ಯಕ್ತಿ ಪ್ರತ್ಯಕ್ಷನಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಗ್ರಾಮದಲ್ಲಿ ಜರುಗಿದೆ.

ಮೃತಪಟ್ಟಿದ್ದಾನೆ ಎಂದು ಮನೆಯವರು ತಿಳಿದಿದ್ದರು. ಆದರೆ, ವ್ಯಕ್ತಿ ಅಸಲಿಗೆ ಮೃತಪಟ್ಟಿರಲಿಲ್ಲ. ಶ್ರೀನಿವಾಸ ಎಂಬ ವ್ಯಕ್ತಿ ಜನವರಿ 26 ರಂದು ನಾಪತ್ತೆಯಾಗಿದ್ದರು. ಫೆಬ್ರವರಿ 3 ರಂದು ಕಲ್ಲುಂಜಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅನಾಥ ಶವ ಪತ್ತೆಯಾಗಿದ್ದು, ಶ್ರೀನಿವಾಸ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಕುಟುಂಬದವರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ನಂತರ ವೈಕುಂಠ ಸಮಾರಾಧನೆ ನಡೆಸುವಾಗ ವೈಕುಂಠ ಸಮಾರಾಧನೆ ನಡೆಯುವ ವೇಳೆಯಲ್ಲಿಯೇ ಶ್ರೀನಿವಾಸ ಮನೆಗೆ ಮರಳಿದ್ದಾನೆ ಎಂದು ಹೇಳಲಾಗಿದೆ.

- Advertisement -

Related news

error: Content is protected !!