ಮಂಗಳೂರು: ಮನೆಯೊಂದರಲ್ಲಿ ದನವನ್ನು ಕಳವು ಮಾಡಿ ತಂದು ಅಕ್ರಮವಾಗಿ ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮನೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಮಂಗಳೂರಿನ ಅಡ್ಡೂರು ಬಳಿ ನಡೆದಿದೆ.

ಅಡ್ಡೂರು ಬಳಿ ಮನೆಯೊಂದರಲ್ಲಿ ದನವನ್ನು ಕಳವು ಮಾಡಿ ತಂದು ಅಕ್ರಮವಾಗಿ ಕಡಿದು ಮಾಂಸ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬಜಪೆ ಠಾಣಾ ಪಿಎಸ್ಐ ಪೂವಪ್ಪ ರವರ ನೇತ್ರತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, 2 ಜನ ಆರೋಪಿ ಸಮೇತ ಮಾರಾಟ ಮಾಡಲು ತಯಾರು ಮಾಡಿದ್ದ 164 ಕೆ.ಜಿ. ದನದ ಮಾಂಸ, ಚೂರಿ, ಕತ್ತಿ, ಇಲೆಕ್ಟ್ರಿಕಲ್ ತಕ್ಕಡಿ ಸಮೇತ ಸುಮಾರು ರೂ. 40,000/- ಮೌಲ್ಯ ಮಾಂಸ ಮತ್ತು ಸೊತ್ತು ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ಪಾಂಡೇಲು ಗದ್ದೆ ಮನೆಯ ಅಬ್ದುಲ್ ಮಜೀದ್(35) ಹಾಗೂ ಮುಸ್ತಾಫ(30) ಎಂದು ಗುರುತಿಸಲಾಗಿದೆ.

ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀ ಮಹೇಶ್ ಕುಮಾರ್ ಎನ್ ಮತ್ತು ಪೊಲೀಸ್ ನಿರೀಕ್ಷಕರಾದ ಶ್ರೀ ಕೆ. ಆರ್ ನಾಯ್ಕ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಪೂವಪ್ಪ ಹೆಚ್.ಎಂ, ಶ್ರೀಮತಿ ಕಮಲ ರವರು ಮತ್ತು ಸಿಬ್ಬಂದಿಗಳಾದ ಎ.ಎಸ್.ಐ. ಮೊಹಮ್ಮದ್, ರಾಮ ಪೂಜಾರಿ, ಸಿಬ್ಬಂದಿಗಳಾದ ಸಂತೋಷ ಡಿ.ಕೆ, ರಶೀದ್ ಶೇಖ್, ಪುರುಶೋತ್ತಮ, ರಾಜೇಶ್, ಗಿರೀಶ್, ವಕೀಲ ಎನ್ ಲಮಾಣಿ, ಲಕ್ಷ್ಮಣ ಕಾಂಬ್ಳೆ, ಸಿದ್ದಲಿಂಗಯ್ಯ, ಸಂಜೀವ ರವರುಗಳು ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.










